ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ ಕಾಲು ಕಟ್ಟಿ ಬಾಯಿ ಬಿಗಿದು ದರೋಡೆ ಮಾಡಿರುವ ಘಟನೆ ನಗರದ ಕೆಎಸ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳವಾರ ಲಕ್ಷ್ಮಿ (57) ಎಂಬುವರು ಮನೆಯಲ್ಲಿದ್ದಾಗ ಈ ಕೃತ್ಯ ನಡೆಸಿದ್ದಾರೆ. ಲಕ್ಷ್ಮಿ ಅವರ ಮಗಳು ಡಾ.ವೈಷ್ಣವಿ ಸುರೇಶ್ ಅವರ ಕ್ಲಿನಿಕ್‌ಗೆ ತೆರಳಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಮನೆಗೆ ನುಗ್ಗಿ 3.5 ಲಕ್ಷ ನಗದು, ಮೊಬೈಲ್ ಸೇರಿದಂತೆ 7.5 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ಡಾ ವೈಷ್ಣವಿ ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವೈದ್ಯೆ ವೈಷ್ಣವಿ ಕಳೆದ ಒಂದು ತಿಂಗಳಿನಿಂದ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಬಳಿಯೇ ಇದ್ದರು. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಗಳು ಸಂತ್ರಸ್ತೆಯ ಬಾಯಿ ಮುಚ್ಚಿಸಲು ಪ್ಲಾಸ್ಟರ್ ಬಳಸಿದ್ದಾರೆ.
ಈ ಸಂಬಂಧ ಡಾ ವೈಷ್ಣವಿ ಕೆಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.