ಬ್ರಹ್ಮಾವರ: ಶಾಲೆಯ ಜಂತಿಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ ನೀಲಾವರ ಮಹಿಷ ಮರ್ದಿನಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.8ರಂದು ನಡೆದಿದೆ.

ನೀಲಾವರ ನಿವಾಸಿ 32 ವರ್ಷದ ಗಿರೀಶ್ ಆತ್ಮಹತ್ಯೆಗೆ ಶರಣಾದ ಯುವಕ.

ಈತ ಅವಿವಾಹಿತನಾಗಿದ್ದು, ವಿಪರೀತ ಮದ್ಯಸೇವನೆ ಮಾಡುವ ಚಟ ಹೊಂದಿದ್ದನು. ಇದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಆ.8ರಂದು ಮಧ್ಯಾಹ್ನ 12:30ರಿಂದ ಸಂಜೆ 6:15 ರ ಮಧ್ಯಾವಧಿಯಲ್ಲಿ ಶಾಲೆಯ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಸಿದು ಬಿದ್ದು ಮೃತ್ಯು:

ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಸ್ವಾಮಿ ಮೆಡಿಕಲ್ ಬಳಿ ಇಂದು ಬೆಳಕಿಗೆ ಬಂದಿದೆ.


ಮೃತರನ್ನು ಬಿಜೂರು ಗ್ರಾಮದ ನಿವಾಸಿ 44ವರ್ಷದ ನಾಗರಾಜ ಎಂದು ಗುರುತಿಸಲಾಗಿದೆ. ಇವರು ಹುಬ್ಬಳಿಯಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹುಬ್ಬಳಿಯಲ್ಲಿ ಕೆಲಸ ಮಾಡಲು ಆಗದೆ ಆ.8ರಂದು ಹುಬ್ಬಳಿಯಿಂದ ಹೊರಟಿದ್ದು, ಸಂಜೆ 6 ಗಂಟೆಗೆ ಮನೆಗೆ ಬರುವುದಾಗಿ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಮಧ್ಯರಾತ್ರಿ 1ಗಂಟೆಗೆ ಬೈಂದೂರು ಬಸ್ ನಿಲ್ದಾಣದಲ್ಲಿಇಳಿದು ಮನೆ ಕಡೆಗೆ ನಡೆದುಕೊಂಡು ಬರುವ ವೇಳೆ ಯಡ್ತರೆ ಗ್ರಾಮದ ಸ್ವಾಮಿ ಮೆಡಿಕಲ್ ಬಳಿ ಕುಸಿದು ಬಿದ್ದಿದ್ದು, ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ನಾಗರಾಜ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!