ಮಂಗಳೂರು: ನಗರದ ಲಾಡ್ಜ್ ಒಂದರಲ್ಲಿ ಬುಧವಾರ ದಂಪತಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಫಳ್ನೀರ್ ನ ಲಾಡ್ಜ್ ಗೆ ಫೆ.6 ರಂದು ಬಂದಿದ್ದ ಕೇರಳ ಮೂಲದ ರವೀಂದ್ರ (55), ಸುಧಾ (50) ಸಾವನ್ನಪ್ಪಿದ ದಂಪತಿ.
ಕೇರಳದಲ್ಲಿ ಬಟ್ಟೆ ವ್ಯಾಪಾರಿಗಳಾಗಿದ್ದರೆಂಬ ಮಾಹಿತಿ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕೇರಳ ಮೂಲದವರಾಗಿದ್ದು ಘಟನೆಗೆ ಕಾರಣ ಗೊತ್ತಾಗಿಲ್ಲ.ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.