ಹೌದು..,ವಿಲಕ್ಷಣ ಘಟನೆ ಅನಿಸಿದ್ರು ತಾಯಿಯೊಬ್ಬಳು ತನ್ನ ಮಗನ ವೆಚ್ಚ ಭರಿಸಲು ಬಸ್ಸಿನ ಎದುರು ಹಾರಿ ಜೀವ ಕಳೆದುಕೊಂಡಿದ್ದಾರೆ.
ಯಾರದೋ ಮಾತು ಕೇಳಿ, ಜೀವ ಕಳೆದುಕೊಂಡರೆ ತನ್ನ ಮಗನ ಶಿಕ್ಷಣದ ವೆಚ್ಚ ಸರ್ಕಾರ ಭರಿಸಲಿದೆಯೆಂದು ನಂಬಿ ತನ್ನ ಪ್ರಾಣ ಅರ್ಪಿಸಿದ್ದಾಳೆ.
ಸೆಲೇಮ್ ನಲ್ಲಿ ಈ ಘಟನೆ ವರದಿಯಾಗಿದ್ದು ತನ್ನ ಮಗನ ಕಾಲೇಜಿನ 45 ಸಾವಿರ ಕಟ್ಟಲು ಸಾಧ್ಯವಾಗಾದೆ ಇದ್ದಾಗ ವೇಗವಾಗಿ ಬರುತ್ತಿದ್ದ ಬಸ್ಸಿಗೆ ಏಕಾಏಕಿ ಅಡ್ಡ ಬಂದು ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು, ಆದರೂ ನಾವು ‘ಅಭಿವೃದ್ಧಿ’ಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆಯೇ?! ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗುತ್ತಿದೆ.