ಗಾಂಜಾ ಹಾಗೂ ಮಾದಕವಸ್ತು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರ ತಂಡವೊಂದನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲದ ವಿ.ಪಿ ನಗರದ ಬಳಿಯ ಫ್ಲಾಟ್ ವೊಂದರಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು 27ವರ್ಷದ ಮುಝಾಮಿಲ್, 25ವರ್ಷದ ಮೊಹಮ್ಮದ್ ಅನಾಜ್ ಸಾಹೇಬ್, 26ವರ್ಷದ ಮೊಹಮ್ಮದ್ ರಫೀಕ್ ಹಾಗೂ 19ವರ್ಷದ ನಿಯಾಲ್ ಎಂದು ಗುರುತಿಸಲಾಗಿದೆ. ಪೊಲೀಸರ ದಾಳಿ ವೇಳೆ ರಾಕೀಬ್ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಜ.13 ರಂದು ವಿ.ಪಿ ನಗರದ 3ನೇ ಮುಖ್ಯ ರಸ್ತೆಯ ಬಳಿಯ ಫ್ಲಾಟ್ ವೊಂದರ ರೂಮಿನಲ್ಲಿ ಮಾದಕ ವಸ್ತುಗಳೊಂದಿಗೆ ದರೋಡೆಗೆ ಸಂಚು ರೂಪಿಸಿ, ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ 5.0 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತು, 110 ಗ್ರಾಂ ಗಾಂಜಾ, ದರೋಡೆಗೆ ಹೊಂದಿದ್ದ ಮಾರಕಾಯುಧಗಳನ್ನು ಹಾಗೂ 5 ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.