ಮಲ್ಪೆ: ಪಿಯುಸಿ ವಿದ್ಯಾರ್ಥಿ ನಾಪತ್ತೆ

ಮಲ್ಪೆ:  ತೆಂಕನಿಡಿಯೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆ ಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ವಿದ್ಯಾರ್ಥಿ ಸೃಜನ್ (17) ರವರು ಪ್ರಸ್ತುತ ಉಡುಪಿಯ ಖಾಸಗಿ ಟ್ಯಟೋರಿಯಲ್ ಕಾಲೇಜಿನಲ್ಲಿ 12 ನೇ ತರಗತಿ ಓದುತ್ತಿದ್ದಾರೆ.

ಆಗಸ್ಟ್ 4ರಂದು ಬೆಳಿಗ್ಗೆ 09:15 ಗಂಟೆಗೆ ಮನೆಯಿಂದ ಹೋದವನು ಈವರೆಗೆ ಮನೆಗೆ ಬಂದಿರುವುದಿಲ್ಲ,. ತೆಂಕನಿಡಿಯೂರು ನಿವಾಸಿಶರ್ಮಿಳಾ ರವರ ಮಗ ಈ ಹಿಂದೆ ಎರಡು  ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸ್ಸು ಬಂದಿರುತ್ತಾನೆ. ಶರ್ಮಿಳಾ ರವರು ಮಗನನ್ನು ಹುಡುಕಾಡಿದರೂ  ಪತ್ತೆಯಾಗಿರುವುದಿಲ್ಲ. ಶರ್ಮಿಳಾ ರವರ ಮಗ  ಮನೆಯಿಂದ ಹೋಗುವಾಗ  ಕ್ರೀಮ್ ಕಲರ್  ಪ್ಯಾಂಟ್ ಮತ್ತು  ಕಾಪಿಬಣ್ಣದ  ಹೂ ಗಳಿರುವ  ಉದ್ದತೋಳಿನ ಶರ್ಟ್ ಧರಿಸಿರುವ ಕುರಿತು ವರದಿಯಾಗಿದೆ ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63 /2022 ಕಲಂ: ಹುಡುಗ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!