ಮಹಿಳೆಗೆ ಹೆಲ್ಮೆಟ್ ನಿಂದ ಹೊಡೆದು ಚಿನ್ನದ ಸರ ಕದ್ದು ಪರಾರಿಯಾದ ಕಳ್ಳ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳೆಯರು ಓಡಾಡಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೈಕ್ ನಲ್ಲಿ ಬಂದ ಕಳ್ಳ ಮಹಿಳೆಯನ್ನು ಹೆಲ್ಮೆಟ್ ನಿಂದ ಹೊಡೆದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದ್ದುಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಡಸಿಘಟ್ಟ ಬಳಿ ನಡೆದಿದೆ.

40 ವರ್ಷದ ಮನಿಷಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತ್ಯಾಮಗೊಂಡ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories