ಶಿವಮೊಗ್ಗ: ರಾತ್ರೋರಾತ್ರಿ ಬ್ಯಾಂಕ್ ಲಾಕರ್ ಮುರಿಯಲು ಯತ್ನಿಸಿದ ಘಟನೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಘಟನೆ ಶುಕ್ರವಾರ (ಆಗಸ್ಟ್ 2) ದಂದು ನಡೆದಿರುವುದು ಬೆಳಕಿಗೆ ಬಂದಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳ್ಳತನ ನಡೆದಿದ್ದು ಆಯುಧದಿಂದ ಬ್ಯಾಂಕಿನ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಹಣ, ಬಂಗಾರ, ಡಿಮಾಂಡ್ ಡ್ರಾಫ್ಟ್‌ಗಳನ್ನು ಇಟ್ಟಿದ್ದ ಲಾಕರ್ ಮುರಿಯಲು ಯತ್ನಿಸಿದ್ದಾರೆ ಆದರೆ ಲಾಕರ್ ಓಪನ್ ಆಗದ ಹಿನ್ನೆಲೆಯಲ್ಲಿ ಬ್ಯಾಂಕಿನ 3 ಸಿಸಿ ಕ್ಯಾಮರಾ, ಡಿವಿಆರ್, ರೋಟರ್, ಲ್ಯಾನ್ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಸ್ವಿಚ್, ಬಿಎಸ್‌ಎನ್‌ಎಲ್ ಮೀಡಿಯಾ ಕನ್ವರ್ಟರ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಅಂದಾಜು ಮೌಲ್ಯ 1.20 ಲಕ್ಷ ರೂ. ವಸ್ತುಗಳನ್ನು ಕಳ್ಳರು ಕದ್ದಿದ್ದು, ಕಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.