ರಾಯಚೂರು: 21 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ

ರಾಯಚೂರು,ಡಿ.19:- 2020-21ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು 2020 ಡಿ.21 ರಿಂದ ಜನವರಿ 20ರ ವರೆಗೆ ಸಮೀಕ್ಷೆ ನಡೆಸಲಾಗುತ್ತದೆ.
2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲಾ ಮುಖ್ಯವಾಹಿನಿಗೆತರಲು ಕರ್ನಾಟಕ ರಾಜ್ಯ ಉಚಿತ ಶಿಕ್ಷಣ ಮತ್ತು ಕಡ್ಡಾಯ ಹಕ್ಕು ಕಾಯ್ದೆ ಅಡಿಯ 2012 ರನ್ವಯ ಸ್ಥಳೀಯ ಸಂಸ್ಥೆಗಳು ಶಿಕ್ಷಣ ರಿಜಿಸ್ಟರ್‍ನ್ನು ನಿರ್ವಹಿಸಬೇಕಾಗಿರುತ್ತದೆ. ಕರ್ನಾಟಕ ರಾಜ್ಯ ಉಚಿತ ಶಿಕ್ಷಣ ಮತ್ತು ಕಡ್ಡಾಯ ಹಕ್ಕು ಕಾಯ್ದೆ ಅಡಿಯ 2014 ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಡಿ.21 ರಿಂದ ಜನವರಿ 20ರ ವರೆಗೆ ಸಮೀಕ್ಷೆಯನ್ನು ಸೆಂಟರ್ ಫಾರ್ ಇ – ಗವರ್ನೆನ್ಸ್ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಿದ ಕರ್ನಾಟಕ ಸರ್ಕಾರ ಆಪ್ ಸ್ಟೋರ್ ನಲ್ಲಿರುವ ಕರ್ನಾಟಕ ಹೆಚ್2ಹೆಚ್ ಮಕ್ಕಳ ಸರ್ವೆ ಆಪ್ ಎಂಬ ಮೊಬೈಲ್ ಆಪ್ ಮುಖಾಂತರ ಸಂಬಂಧಪಟ್ಟ ಅಂಗವಾಡಿ ಕಾರ್ಯಕರ್ತೆ ಹಾಗೂ ಸರ್ಕಾರೇತರ ಸಂಸ್ಥೆ ( ಎನ್.ಜಿ.ಓ.) ಮತ್ತು ನಗರಸಭೆ ಸಿಬ್ಬಂದಿಗಳಿಂದ ರಾಯಚೂರು ನಗರಸಭೆ ವಪ್ತಿಯಲ್ಲಿ ಬರುವ ಒಟ್ಟು 35 ವಾರ್ಡ್‍ಗಳಲ್ಲಿ ಸಮೀಕ್ಷೆ ಕಾರ್ಯವು ಡಿ.21 ರಿಂದ ಪ್ರಾರಂಭವಾಗಲಿದೆ.
ಈ ಸಮೀಕ್ಷೆಯಲ್ಲಿ ಎಸ್.ಡಿ.ಎಂ.ಸಿ. ಪೆÇೀಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸುವಂತೆ ಕೋರಿದೆ. ಹಾಗೂ ರಾಯಚೂರು ನಗರದಲ್ಲಿ ಈಗಾಗಲೇ ಇರುವ 43 ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯಕ್ಕೆ ಕೊಳಚೆ ನಿರ್ಮೂಲ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆಸಕ್ತಿವುಳ್ಳ ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ, ಸ್ತ್ರೀಶಕ್ತಿ ಸಂಘ ಮತ್ತು ಯುವ ಶಕ್ತಿ ಸಂಘಗಳು ಸಹಕಾರ ನೀಡಿ ಸಮೀಕ್ಷೆ ಕಾರ್ಯವು ಯಶಸ್ವಿಗೊಳಿಸಬೇಕೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories