ಕುಟ್ಟ ಸಮೀಪದ ಚೂರಿಕಾಡು ಎಂಬಲ್ಲಿ ನೆನ್ನೆ ದಿನ ಹುಲಿ ದಾಳಿ ಮಾಡಿ ಬಾಲಕನನ್ನು ಆಪೋಶನ ತೆಗೆದುಕೊಂಡ ಕಹಿ ಘಟನೆ ಮರೆಯಾಗುವ ಮುನ್ನವೇ ಮತ್ತೊಂದು ಜೀವ ಹುಲಿಯ ಹಿಡಿತಕ್ಕೆ ಸಿಲುಕಿ ಕೊನೆಯುಸಿರುಬಿಟ್ಟಿದೆ.
ಕೆ. ಬಾಡಗ ಗ್ರಾಮದ ಚೂರಿಕಾಡುವಿನಲ್ಲಿ ಹುಲಿ ದಾಳಿಗೆ 75 ವರ್ಷ ಪ್ರಾಯದ ರಾಜು ಎಂಬ ವೃದ್ಧರೊಬ್ಬರು ಅಸುನೀಗಿದ್ದಾರೆ. ಲೈನ್ ಮನೆಯಿಂದ ಕೆಲಸಕ್ಕೆ ಹೊರ ಬರುತ್ತಿದ್ದಂತೆ ಕಾಫಿ ತೋಟದಲ್ಲಿ ಅವಿತಿದ್ದ ಹುಲಿ ಆವರ ಮೇಲೆ ದಾಳಿ ಮಾಡಿ ಜೀವವನ್ನು ಕಸಿದಿದೆ