ಶಬರಿಮಲೆ ಯಾತ್ರರ್ಥಿಗಳಿದ್ದ ವ್ಯಾನ್ ಉರುಳಿ ಬಿದ್ದು ಎಂಟು ಮಂದಿ ಮೃತ್ಯು

ಪಟ್ಟಣಂತಿಟ್ಟ: ಶಬರಿಮಲೆ ಯಾತ್ರಿಗಳಿದ್ದ ವ್ಯಾನ್ ಉರುಳಿಬಿದ್ದು ಕನಿಷ್ಠ ಎಂಟು ಭಕ್ತರು ಸಾವನ್ನಪ್ಪಿದ್ದ ದುರಂತ ಘಟನೆ ಕೇರಳ – ತಮಿಳುನಾಡು ಗಡಿ ಭಾಗದ ಕುಮಿಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮಗು ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳೆಲ್ಲರೂ ತೇಣಿ-ಆಂಡಿಪಟ್ಟಿ ಮೂಲದವರಾಗಿದ್ದರು.

ಈ ಯಾತ್ರಾರ್ಥಿಗಳು ಶಬರಿಮಲೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹಿಂದೆ ಬರುತ್ತಿದ್ದರು. ಕುಮಿಲಿ- ಕುಂಬಮ್ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಸಾಗಿಸುವ ಮೊದಲ ಪೆನ್‌ಸ್ಟಾಕ್ ಪೈಪ್ ಬಳಿ ಈ ಘಟನೆ ನಡೆದಿದೆ.

ವ್ಯಾನ್ ಭಾರೀ ವೇಗದಲ್ಲಿ ಸಾಗುತ್ತಿತ್ತು. ವ್ಯಾನ್ ಸುಮಾರು 40 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ.

ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ವಿ ಮುರಳೀಧರನ್ ಅವರು ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

Latest Indian news

Popular Stories