ಶಿಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಮುಖ್ಯಶಿಕ್ಷಕ, ಬಿಇಓ, ಸಿಆರ್ಪಿ ಟಾರ್ಚರ್

ವಿಜಯಪುರ: ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶಿಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಿಕ್ಷಕ ರವಿವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಿಂದಗಿ ತಾಲೂಕಿನ ಸಾಸಾಬಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ್ ನೇಣಿಗೆ ಶರಣಾಗಿದ್ದ. ಸಧ್ಯ ಪ್ರಕರಣಕ್ಕೆ ಟ್ವಿಸ್ಟ ಸಿಕ್ಕಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳೆ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

IMG 20230213 WA0033 Crime, Vijayapura

ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್ಪಿ ಜಿ ಎನ್ ಪಾಟೀಲ್ನಿಂದ ಟಾರ್ಚರ್ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ ನಲ್ಲಿ ಉಲ್ಲೇಖನ ಮಾಡಲಾಗಿದೆ. ಎಸ್ ಎಲ್ ಭಜಂತ್ರಿ ಮುಖ್ಯಶಿಕ್ಷಕ ಹುದ್ದೆಯ ಚಾರ್ಜ್ ಶಿಕ್ಷಕ ಬಸವರಾಜ ಗೆ ಬಿಟ್ಟು ಕೊಟ್ಟಿದ್ದರು. ಚಾರ್ಜ್ ಬಿಟ್ಟುಕೊಟ್ಟ ಬಳಿಕ ಭಜಂತ್ರಿ ಸತಾಯಿಸಿದ್ದಾರೆ. ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ಸಿಂದಗಿ ಬಿಇಓ ಎಚ್ ಎಂ ಹರಿನಾಳ ನೋಟಿಸ್ ಕೊಡುತ್ತಿದ್ದರು. ಗ್ರಾಮದ ಸಂಗಮೇಶ್ ಚಿಂಚೋಳಿಯಿಂದ ಅಲಿಗೆಷನ್ ಮಾಡಿ ಸಿಆರ್ ಪಿ ಹಾಗೂ ಸಂಗಮೇಶ್ ನನ್ನಿಂದ ಹಣ ಪಡೆದಿದ್ದರು. ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ದೂರು ನೀಡಿದರು. ಆದ್ರೇ, ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಆಗಿದೆ. ನನ್ನ ಹೆಂಡತಿ, ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.

IMG 20230213 WA0035 Crime, Vijayapura

ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Indian news

Popular Stories