ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪಿಡಿಓ ಮೇಲೆ ಹಲ್ಲೆ ಆರೋಪ:ಪ್ರಕರಣ ದಾಖಲು

ಸಿದ್ದಾಪುರ: ಸರಕಾರಿ ಕರ್ತವ್ಯದಲ್ಲಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಪಿಡಿಓ ಹೆಚ್.ಎಸ್ ಅನಿಲ್ ಕುಮಾರ್ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸವವಸತಿ ಯೋಜನೆಯ ಫಲಾನುಭವಿಯೊಬ್ಬರ ಮನೆಯ ಜಿಪಿಎಸ್ ಮಾಡಲು ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂರನೆಯ ವಾರ್ಡಿಗೆ ಮೋಟಾರು ಸೈಕಲ್‌ ನಲ್ಲಿ ತೆರಳಿ ವಾಪಾಸು ಬರುತ್ತಿದ್ದ ಸಂದರ್ಭ ಇದೇ ಗ್ರಾಮದ ಶಿವ ಕುಮಾರ್ ಹಾಗೂ ಪದ್ಮನಾಭ ಎಂಬವರು ದಾರಿ ತಡೆದು ಇದು ಖಾಸಗಿ ರಸ್ತೆ, ಇಲ್ಲಿ ಯಾಕೆ ಬಂದಿದ್ದೀರಿ ಎಂದು ಮೋಟಾರ್ ಸೈಕಲ್ ನ ಕೀಯನ್ನು ತೆಗೆದುಕೊಂಡು ಅವ್ಯಾಚ ಪದಗಳಿಂದ ಬೈದು ಹಲ್ಲೆ ನಡೆಸಿರುವುದಲ್ಲದೆ ಕೊಲೆ ಬೆದರಿಗೆ ಒಡ್ಡಿರುವುದಾಗಿ ಪಿಡಿಓ ಅನಿಲ್ ಕುಮಾರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Latest Indian news

Popular Stories

error: Content is protected !!