ಸ್ವತಃ ತಮ್ಮನನ್ನೆ ಗುಂಡು ಹಾರಿಸಿ ಹತ್ಯೆಗೈದ ಅಣ್ಣ:ಕೊಡಗಿನ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದ ಘಟನೆ

ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕು ಬೇಗೂರಿನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಅರ್ವತೋಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಂಡ ಪ್ರಕಾಶ್,( 57) ಎಂಬವರಿಗೆ ಅವರ ಸಹೋದರ ಸುಬ್ರಮಣಿ ಬೇಗೂರು ತೋಟದಲ್ಲಿ ಗುಂಡು ಹಾರಿಸಿದ ಪರಿಣಾಮ ಪ್ರಕಾಶ್ ಮೃತಪಟ್ಟಿದ್ದಾರೆ. ಪ್ರಕಾಶ್ ಅವರ ಪುತ್ರನಿಗೂ ಗುಂಡು ತಗಲಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ..

Latest Indian news

Popular Stories