ವಿಜಯಪುರ: ದಾಖಲೆ ಇಲ್ಲದೆ ಸಾರಿಗೆ ಬಸ್ನಲ್ಲಿ ಸಾಗಿಸುತ್ತಿದ್ದ ಹಣ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಯಲಗೂರು ಕ್ರಾಸ್ ಚೆಕ್ಪೋಸ್ಟ್ ಬಳಿ ಮಂಗಳವಾರ ನಡೆದಿದೆ.
9.95 ಲಕ್ಷ ಹಣ ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಹೊಸಪೇಟೆಯಿಂದ ವಿಜಯಪುರಕ್ಕೆ ಹೊರಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಹಣ ಜಪ್ತಿಗೈದಿದ್ದಾರೆ. ನೂರ್ಖಾನ್ ಧಪೇದಾರ್ ಎಂಬಾತನ ಬಳಿ ಹಣ ಪತ್ತೆಯಾಗಿದೆ. ಈರುಳ್ಳಿ ಮಾರಾಟ ಮಾಡಿ ಬಂದ ಹಣ ಎಂದು ಹೇಳಿಕೆ ನೀಡಿರುವ ನೂರ್ಖಾನ್ ದಾಖಲೆ ನೀಡಿ ಹಣ ಪಡೆದುಕೊಳ್ಳುವಂತೆ ತಹಶಿಲ್ದಾರರ ಸೂಚಿಸಿದ್ದಾರೆ.
ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.