ಸೆಲ್ಫಿ ತೆಗೆದುಕೊಳ್ಳುವಾಗ ಕಿತವಾಡ ಫಾಲ್ಸ್ ಗೆ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರ ಮೃತ್ಯು, ಓರ್ವಳ ಸ್ಥಿತಿ ಗಂಭೀರ!

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಕಿತವಾಡ ಫಾಲ್ಸ್ ಗೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ. 

ಬಾಶಿಬಾನ್ ಮದರಸ ಶಾಲೆಯಲ್ಲಿ ಓದುತ್ತಿದ್ದ 40 ಯುವತಿಯರ ತಂಡ ಬೆಳಗಾವಿ ನಗರದಿಂದ 26 ಕಿಮೀ ದೂರದಲ್ಲಿರುವ ಮಹಾರಾಷ್ಟ್ರ-ಕರ್ನಾಟಕದ ಗಡಿಯಲ್ಲಿರುವ ಕಿತ್ವಾಡ್ ಅಣೆಕಟ್ಟು ಮತ್ತು ಜಲಪಾತ ವೀಕ್ಷಣೆಗೆ ತೆರಳಿತ್ತು. ಈ ವೇಳೆ ಜಲಪಾತದ ಸೆಲ್ಫಿ ತೆಗೆದುಕೊಳ್ಳಲು ಯುವತಿಯ ತಂಡ ಮುಂದಾಗಿತ್ತು. ಈ ವೇಳೆ ಐವರು ಯುವತಿಯರು ಕಾಲು ಜಾರಿ ಫಾಲ್ಸ್​ಗೆ ಬಿದ್ದಿದ್ದಾರೆ. 

ಮೃತ ಯುವತಿಯರನ್ನು ಉಜ್ವಲ್ ನಗರ ನಿವಾಸಿ 17 ವರ್ಷದ ಆಸೀಯಾ ಮುಜಾವರ್, ಅನಗೋಳದ 20 ವರ್ಷದ ಕುದ್‌ಶೀಯಾ ಹಾಸಂ ಪಟೇಲ್, ಝಟ್‌ಪಟ್ ಕಾಲೋನಿಯ 20 ವರ್ಷದ ರುಕ್ಕಶಾರ್ ಭಿಸ್ತಿ ಹಾಗೂ 20 ವರ್ಷದ ತಸ್ಮಿಯಾ ಎಂದು ಗುರುತಿಸಲಾಗಿದೆ.  ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಯುವತಿಯರ ಮೃತದೇಹಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ತರಲಾಗಿದೆ. ಶನಿವಾರ ಮಧ್ಯಾಹ್ನ ಆಸ್ಪತ್ರೆ ಬಳಿ ವಿದ್ಯಾರ್ಥಿಗಳ ಸಂಬಂಧಿಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories

error: Content is protected !!