ಕಾರು ಮತ್ತು ಬೈಕ್ ಅಪಘಾತದಲ್ಲಿ ಸೊರಬದ ಉಳವಿ ಸಮೀಪ ಸಹೋದರಿಬ್ಬರು ಅಸುನೀಗಿದ್ದಾರೆ.
ಮೃತರನ್ನು ಸುಹೇಲ್ (27) ಮತ್ತು ಸಯ್ಯದ್ ಅಫ್ರಿದ್ (22) ಎಂದು ಗುರುತಿಸಲಾಗಿದೆ. ಮದುವೆಗೆಂದು ಇಬ್ಬರು ಸಹೋದರರು ಜೊತೆಯಾಗಿ ಹೊರಟಿದ್ದರು. ಉಳವಿ ಸಮೀಪ ಅಪಘಾತ ಸಂಭವಿಸಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸಾಗರದ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹಗಳನ್ನು ಇಡಲಾಗಿದೆ.