ಬಳ್ಳಾರಿ: ನಾಲ್ಕು ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಗಂಡ ಜಗಳ ಮಾಡುತ್ತಿದ್ದರಿಂದ ನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳ ಜತೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಮಾಡಿದ್ದಾರೆ.
ಮೋಕಾ ಬಳಿಯ ತುಂಗಭದ್ರಾ ಕಾಲುವೆಗೆ ಹಾರಿದ್ದ ತಾಯಿ ಲಕ್ಷ್ಮೀ ಹಾಗೂ ಎರಡು ವರ್ಷದ ಶಾಂತಿ ಮೃತಪಟ್ಟಿದ್ದು 4 ವರ್ಷದ ವೆನಿಲ್ಲಾ ಎಂಬ ಹೆಣ್ಣು ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತರು ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ನಿವಾಸಿಗಳು ಎಂದು ಗುರುತಿಸಲಾಗಿದೆ. 16 ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಜೊತೆ ಲಕ್ಷ್ಮೀ ವಿವಾಹವಾಗಿತ್ತು. ಬಳ್ಳಾರಿ ನಗರದ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.