ಬೆಂಗಳೂರು, ಡಿ.24 (ಯುಎಎನ್‍ಐ):- ಕ್ರಿಸ್ಮಸ್ ಮತ್ತು ಹೊಸವರ್ಷದ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಕುಖ್ಯಾತ ಡ್ರಗ್ಸ್ ಜಾಲವನ್ನು ಭೇದಿಸಿರುವ ಬೈಯಪ್ಪನಹಳ್ಳಿ ಪೆÇಲೀಸರು, ಇಬ್ಬರು ನೈಜೀರಿಯಾ ದೇಶದ ಪ್ರಜೆಗಳನ್ನು ಬಂಧಿಸಿ ಸುಮಾರು 1 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ನೈಜೀರಿಯಾದ ಅನಂಬರ ರಾಜ್ಯದ ಸದ್ಯ ಬೆಂಗಳೂರಿನ ಭಾರತಿನಗರ ಹುಣಸಮಾರನಹಳ್ಳಿ ಗ್ರಾಮದ 1ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಡೋನ್ ಚುಕ್ಸ್ ಒಕೆಕೊ ಅಲಿಯಾಸ್ ಟಮ್ ಟಮ್ ಅಲಿಯಾಸ್ ಡಾಮಿನಿಕ್ (39) ಮತ್ತು ನೈಜೀರಿಯಾದ ಎಬಿಎ ಅಬೈ ಸ್ಟೇಟ್ ಮೂಲದ ಬಿದರಹಳ್ಳಿ ಹೋಬಳಿ ಕಣ್ಣೂರು ಗ್ರಾಮದ ನಿವಾಸಿ ಸೆಲೆಸ್ಟೈನ್ ಅನುಗುವಾ ಅಲಿಯಾಸ್ ಒಮೆಮಾ (40) ಬಂಧಿತ ಆರೋಪಿಗಳು ಎಂದು ಅವರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ದಂಧೆ ವಿರುದ್ಧ ಪೂರ್ವ ವಿಭಾಗದ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅದೇ ರೀತಿ ಬೈಯಪ್ಪನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ಸಿ.ವಿ.ರಾಮನ್ ನಗರ, ಬಾಗ್ಮನೆ ಟೆಕ್ ಪಾರ್ಕ್ ಹಿಂಭಾಗ, ಕೃಷ್ಣಪ್ಪ ಗಾರ್ಡನ್, ಟೀಸ್ಟಾಲ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೆÇಲೀಸರು ದಾಳಿ ನಡೆಸಿ, ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.