ಉಡುಪಿ: ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ಸ್ನೇಹಿತ ನಾಪತ್ತೆ!

ಉಡುಪಿ:  3 ವರ್ಷ ಪ್ರಾಯದ ಮಗುವನ್ನು ಸ್ನೇಹಿತ ಕರೆದುಕೊಂಡು ಹೋಗಿ ವಾಪಸು ಬರದಿರುವ ಕುರಿತು ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಮಗು ಶಾಂತ ಎನ್ನುವವರದ್ದಾಗಿದ್ದು ಮಗುವಿನ ಹೆಸರು ಸುಕಾನ್ಯ. ದಾಖಲಾದ ದೂರಿನಂತೆ ಸ್ನೇಹಿತ ಸಂಗಮೇಶನು  ಮೂಡು ಸಗ್ರಿಯಲ್ಲಿರುವ ಬಾಡಿಗೆ ಮನೆಯಿಂದ ಕರೆದುಕೊಂಡು ಹೋಗಿ ಸ್ನೇಹಿತ ಶಂಕರನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಾನೆ.

ಆದರೆ ಸಂಜೆ ಒಬ್ಬನೇ ಮನೆಗೆ ಬಂದಿರುತ್ತಾನೆ. ಮಗುವಿನ ತಾಯಿ ಶಾಂತಾ ರವರು ಮಗುವಿನ ಬಗ್ಗೆ ವಿಚಾರಿಸಿದಾಗ  ತಾನು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಜನವರಿ 12 ರಂದು  ಹೋದವನು ಈವರೆಗೆ ಮನೆಗೆ ಬಾರದೇ ತನ್ನ ಮೊಬೈಲ್ ನ್ನು ಕೂಡಾ ಸ್ವಿಚ್ ಆಫ್ ಮಾಡಿರುತ್ತಾನೆ. ಮಗುವಿನ ಬಗ್ಗೆ ಶಂಕರರವರಿಗೆ  ಕರೆ ಮಾಡಿ ವಿಚಾರಿಸಿದಲ್ಲಿ ಸಂಗಮೇಶ್ ಹಾಗೂ ಮಗಳು ಸುಕನ್ಯಾ ಮನೆಗೆ ಬಂದಿಲ್ಲವಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

Latest Indian news

Popular Stories