ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ- ಶಾಸಕ ಎಸ್‌.ಎನ್ ಸುಬ್ಬಾರೆಡ್ಡಿ

ಗುಡಿಬಂಡೆ ಫೆಬ್ರವರಿ 23: ಕನ್ನಡ ಭವನ ನಿರ್ಮಾಣಕ್ಕೆ 25 ಲಕ್ಷ ಅನುದಾನ ನೀಡುವುದಾಗಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಅತೀ ಹೆಚ್ಚು ಕನ್ನಡ ಕವಿಗಳಿದ್ದು, ಇಂತಹವರಿಂದ ಕನ್ನಡ ಮತ್ತಷ್ಟು ಹೆಚ್ಚು ಶಕ್ತಿಯುತವಾಗಿ ಬೆಳೆಯಲಿ ಎಂಬ ಕಾರಣದಿಂದ ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಕನ್ನಡ ಭವನ ನಿರ್ಮಾಣಕ್ಕಾಗಿ 25 ಲಕ್ಷ ಅನುದಾನ ಕಲ್ಪಿಸಲಾಗುವುದು ಎಂದು ಶಾಸಕ ಎಸ್.

ಎನ್.ಸುಬ್ಬಾರೆಡ್ಡಿ ತಿಳಿಸಿದರು. ಗುಡಿಬಂಡೆ ಪಟ್ಟಣದ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿರುವ ಟಿ. ಪಿ. ಕೈಲಾಸಂ ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ಶ್ರೀ ಕೂರ್ಮಗಿರಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣ ನೆರವೇರಿಸಿ ಮಾತನಾಡಿ ಶಾಸಕನಾಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಾಭಿಮಾನಿಗಳಿಗೆ ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಕೆಲಸ ಮಾಡಿಕೊಡುತ್ತೇನೆ.

ಎಂದರು.ತಾಲೂಕಿಗೆ ಅವಶ್ಯವಿರುವ ಕ್ರೀಡಾಂಗಣ ನಿರ್ಮಾಣ, ಬಸ್ ಡಿಪೋ ನಿರ್ಮಾಣ, ಎಪಿಎಂಸಿ ನಿರ್ಮಾಣ , 17 ಕೋಟಿ ವೆಚ್ಚದಲ್ಲಿ ಅಮೃತ ಯೋಜನೆ ಮಿನೆಲಿಯಂ ಸ್ಕ್ಯಾನ್ ಅಡಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ಯೋಜನೆ, ಬಾಡಿಗೆ ಕಟ್ಟಡಗಳಲ್ಲಿ ಕೆಲ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, 2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ತಾಲೂಕು ಆಡಳಿತ ನಡೆಸಲು ಶ್ರಮವಹಿಸುತ್ತೇನೆ ಎಂದರು.

ನಂತರ ರಾಜಶೇಖರ್ ನಾಯ್ಡು ಮಾತನಾಡಿಗುಡಿಬಂಡೆ ತಾಲೂಕಿನಲ್ಲಿ ಅನೇಕ ಸ್ಥಳಗಳು ಪ್ರವಾಸೋಧ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಲು ಎಲ್ಲಾ ರೀತಿಯ ಅರ್ಹತೆಯನ್ನು ಪಡೆದುಕೊಂಡಿದ್ದು ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಶಾಸಕರ ಭವನ ಹಾಗೂ ನಮ್ಮ ಮೆಟ್ರೋದಲ್ಲಿ ಗುಡಿಬಂಡೆ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಪ್ರದರ್ಶನ ಮಾಡುವಂತೆ ಒತ್ತಾಯಿಸಿದರು. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬಳಿ ಒತ್ತಡ ಹಾಕಿ ಕೆಎಸ್.ಆರ್.ಟಿ.ಸಿ.ಡಿಪೋ ನಿರ್ಮಾಣ ಮಾಡಿಕೊಡುವ ಭರವಸೆ ನೀಡುವಂತೆ ಅಗ್ರಹಿಸಿದರು.

Latest Indian news

Popular Stories