ಪಾಕಿಸ್ತಾನದ ವಿಜಯವೋತ್ಸವ ಆಚರಿಸಿದ ಆರೋಪ: ಸುಳ್ಳು ಪ್ರಕರಣ ದಾಖಲಿಸಿದ್ದ ಕಾರಣ ನ್ಯಾಯಾಲಯದಿಂದ 17 ಮಂದಿ ಖುಲಾಸೆ

2017 ರ ಜೂನ್‌ನಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ವಿಜಯವನ್ನು ಆಚರಿಸಿದ ಆರೋಪದ ಮೇಲೆ 17 ಮುಸ್ಲಿಂ ಪುರುಷರು ಮತ್ತು ಇಬ್ಬರು ಅಪ್ರಾಪ್ತರ ಮೇಲೆ ಪ್ರಕರಣ ದಾಖಲಾಗಿತ್ತು.

ಆರು ವರ್ಷಗಳ ನಂತರ ಇದೀಗ ಮಧ್ಯಪ್ರದೇಶದ ನ್ಯಾಯಾಲಯವು ಹಿಂದೂ ದೂರುದಾರ ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಹೇಳಿಕೆಗಳನ್ನು ನೀಡಲು ಒತ್ತಾಯಿಸಿದ ನಂತರ ಪ್ರಕರಣವನ್ನು ಕಟ್ಟುಕಥೆ ಎಂದು ಹೇಳಿದೆ.

ತಾವು ಮಾಡದ ತಪ್ಪಿಗೆ ಅಕ್ಟೋಬರ್ 2023 ರಲ್ಲಿ ಬಿಡುಗಡೆಗೊಂಡ ನಿರಪರಾಧಿಗಳು‌ ಆರು‌ ವರ್ಷ ಜೈಲಿನಲ್ಲಿ ತಮ್ಮ ಜೀವನ ಕಳೆಯಬೇಕಾಗಿ ಬಂದಿತ್ತು. ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಥಳಿಸಲಾಯಿತು ಮತ್ತು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ. 

40 ವರ್ಷದ ಒಬ್ಬ ಆರೋಪಿ ಇಬ್ಬರು ಮಕ್ಕಳ ತಂದೆ, ಈ ಪ್ರಕರಣದ ಕಾರಣದಿಂದಾಗಿ ಮನನೊಂದು ಮುರಿದು 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಘಟನೆ ಹಿನ್ನಲೆ: 18 ಜೂನ್ 2017 ರಂದು ಲಂಡನ್‌ನ ಓವಲ್ ಸ್ಟೇಡಿಯಂನಲ್ಲಿ ಭಾರತವು ಚಾಂಪಿಯನ್ ಟ್ರೋಫಿ ಫೈನಲ್‌ನಲ್ಲಿ ಸೋತ ಗ್ರಾಮಸ್ಥರು ಪಾಕಿಸ್ತಾನವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿದ್ದಾರೆ, ಸಿಹಿ ಹಂಚಿ ಸಂಭ್ರಮಾಚರಣೆಯ ಪಟಾಕಿಗಳನ್ನು ಸಿಡಿಸಿದ್ದಾರೆ ಎಂಬ ವದಂತಿ ಹರಡಿತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ , 1860 ರ ಅಡಿಯಲ್ಲಿ ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿಗಾಗಿ ಮೊಕದ್ದಮೆ ದಾಖಲಿಸಲಾಯಿತು . ಆರೋಪಿಗಳು ತಾವು ತಪ್ಪು ಮಾಡಿಲ್ಲ ಎಂದು ಹೇಳಿದರೂ ಸಾಕ್ಷ್ಯಾಧಾರವಿಲ್ಲದೆ ಪ್ರಕರಣ ಮುಂದುವರಿಸಲಾಗಿತ್ತು.

ಆರು ವರ್ಷದ ನಂತರ ಇದೀಗ ಸಾಕ್ಷ್ಯಾಧಾರ ಇಲ್ಲದ ಕಾರಣ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿದೆ.
ಹಿಂದೂ ದೂರುದಾರರು ಮತ್ತು ಸರ್ಕಾರಿ ಸಾಕ್ಷಿಗಳು ಸುಳ್ಳು ಆರೋಪಗಳನ್ನು ಮಾಡಲು ಒತ್ತಾಯಿಸಲಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ದೇವಂದರ್ ಶರ್ಮಾ ಅವರು 16 ಮುಸ್ಲಿಂ ಆರೋಪಿಗಳನ್ನು (2019 ರಲ್ಲಿ ಒಬ್ಬರು ಸತ್ತರು) ಖುಲಾಸೆಗೊಳಿಸಿದರು.

ಮಾಧ್ಯಮಗಳು ಅಂದು ಈ ಅಮಾಯಕರನ್ನು “ದೇಶದ್ರೋಹಿ” ಗಳೆಂದು ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದವು. ಇದೀಗ ಅವರು ಖುಲಾಸೆಗೊಂಡಾಗ ಸುಮ್ಮನಿದ್ದು ಮಾಧ್ಯಮಗಳು ತಮ್ಮ ಕುತಂತ್ರ ಬುದ್ದಿಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

Latest Indian news

Popular Stories