ಮುಂದಿನ 5-6 ವರ್ಷಗಳಲ್ಲಿ ನೈಸರ್ಗಿಕ ಅನಿಲ ಪೂರೈಕೆ ಕ್ಷೇತ್ರದಲ್ಲಿ ಭಾರತಕ್ಕೆ 67 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮುಂದಿನ 5-6 ವರ್ಷಗಳಲ್ಲಿ ನೈಸರ್ಗಿಕ ಅನಿಲ ಪೂರೈಕೆ ಕ್ಷೇತ್ರದಲ್ಲಿ ಭಾರತಕ್ಕೆ 67 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗೋವಾದಲ್ಲಿ ಭಾರತ ಎನರ್ಜಿ ವೀಕ್ನ ಎರಡನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಇಂಧನ ಕ್ಷೇತ್ರದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆಯ ಪ್ರಮಾಣ ಈಗ ಶೇ.6.3 ರಷ್ಟಿದ್ದು, ಇದನ್ನು 2030 ರ ವೇಳೆಗೆ ಶೇ.15 ರಷ್ಟಕ್ಕೆ ಏರಿಕೆ ಮಾಡುವ ಗುರಿಯೆಡೆಗೆ ತಮ್ಮ ಸರ್ಕಾರದ ಸುಧಾರಣೆಗಳು ಕೇಂದ್ರೀಕೃತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಭಾರತ ಹೊಂದಿದ್ದು, ನೈಸರ್ಗಿಕ ಅನಿಲವನ್ನು ಪರಿವರ್ತನೆಯ ಇಂಧನವಾಗಿ ನೋಡಲಾಗುತ್ತಿದೆ. ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು, ರಸಗೊಬ್ಬರವನ್ನು ತಯಾರಿಸಲು ಅಥವಾ ವಾಹನಗಳ ಚಾಲನೆಗೆ ಮತ್ತು ಅಡುಗೆಗೆ, CNG ಆಗಿ ಪರಿವರ್ತಿಸಲು ಬಳಸುವ ಅನಿಲ, ಕಲ್ಲಿದ್ದಲಿನಂತಹ ಇತರ ಪಳೆಯುಳಿಕೆ ಇಂಧನಗಳಿಗಿಂತ ಕಡಿಮೆ ಮಾಲಿನ್ಯಕಾರಕ ಇಂಧನವೆಂದು ಪರಿಗಣಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ದರ ಇಂಧನ ಅಗತ್ಯಗಳನ್ನು ಹೆಚ್ಚಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ವಿಶ್ವದ ಮೂರನೇ ಅತಿದೊಡ್ಡ ಇಂಧನ, ತೈಲ ಮತ್ತು LPG ಗ್ರಾಹಕ ರಾಷ್ಟ್ರವಾಗಿದೆ. ಇದು ನಾಲ್ಕನೇ ಅತಿದೊಡ್ಡ LNG ಆಮದುದಾರ ಮತ್ತು ರಿಫೈನರ್ ಜೊತೆಗೆ ನಾಲ್ಕನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿದೆ” ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರದ ಇಂಧನ ಬೇಡಿಕೆಯು 2045 ರ ವೇಳೆಗೆ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಪ್ರಧಾನಿ ಮೋದಿ ಜಾಗತಿಕ ತೈಲ ಮತ್ತು ಅನಿಲ ಸಿಇಒಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿದರು, ಆದರೆ ವಿವರಗಳು ತಕ್ಷಣವೇ ಲಭ್ಯವಾಗಿಲ್ಲ.