15ವರ್ಷದಲ್ಲಿ ಸಂಸದ ಜಿಗಜಿಣಗಿ ಆಸ್ತಿಯಲ್ಲಿ 9000% ಏರಿಕೆ: ಎಡಿಆರ್ ವರದಿಯಿಂದ ಬಹಿರಂಗ

ವಿಜಯಪುರ: ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ಆಸ್ತಿ 15 ವರ್ಷದಲ್ಲಿ ಸುಮಾರು ಶೇ. 9000% ಏರಿಕೆಯಾಗಿರುವ ಕುರಿತು ಎಡಿಆರ್ ವರದಿಯಿಂದ ಬಹಿರಂಗಗೊಂಡಿಗೆ.

ಅಸೋಸಿಯೇಶನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಸಂಸದರ ಆಸ್ತಿಯಲ್ಲಿ ಹಲವುಪಟ್ಟು ಏರಿಕೆಯಾಗಿರುವ ಕುರಿತು ಮಾಹಿತಿ ಇದೆ. 2004 ರಲ್ಲಿ ಇದ್ದ ಆಸ್ತಿಗೂ ಹಾಗೂ 2019ರವರೆಗೆ ಇರುವ ಆಸ್ತಿಗೆ ಹೋಲಿಕೆ ಮಾಡಿ ನೋಡಿದಾಗ ಸುಮಾರು ಶೇ. 9000% ಏರಿಕೆಯಾಗಿದೆ.
ಸಂಸದರು ತಾವು ಚುನಾವಣೆಗೆ ಸ್ಪರ್ಧಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡೆವಿಟ್ ಗಳ ಆಧಾರದ ಮೇಲೆ ಎಡಿಆರ್ ಈ ವರದಿ ತಯಾರಿಸಿದೆ.

2004ರಲ್ಲಿ 54.80 ಲಕ್ಷ ರೂ. ಆಸ್ತಿ ಜಿಗಜಿಣಗಿ ಅವರ ಬಳಿ ಇತ್ತು ಆದರೆ ಅದು 2019 ಬರುವಷ್ಟರಲ್ಲಿ 50 ಕೋಟಿ ರೂ. ಗೂ ಅಧಿಕವಾಗಿದೆ.

2004ರಲ್ಲಿ 54,80,600 ಇದ್ದ ಆಸ್ತಿ 2009ರಲ್ಲಿ 1,17,53,725 ರೂ. ಆಗಿದೆ. ನಂತರ 2009 ರಿಂದ 2014ರ ಐದು ವರ್ಷದ ಅವಧಿಯಲ್ಲಿ ಸುಮಾರು ಒಂದು ಕೋಟಿ ಇದ್ದ ಆಸ್ತಿ 8,94,29,828 ರೂ. ಆಗಿದೆ. 2014ರಲ್ಲಿ ಸುಮಾರು 8,94,29,828 ರೂ. ಇದ್ದ ಆಸ್ತಿಯು 2019ರವರೆಗೆ ಸುಮಾರು 50,41,22,985 (50.41 ಕೋಟಿ) ರೂ. ಆಗಿದೆ ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಿದೆ.

Latest Indian news

Popular Stories