CrimeUdupi

ಉಡುಪಿ ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣ | ಕ್ರೈಮ್ ನ್ಯೂಸ್

ಉಡುಪಿ: ಜಿಲ್ಲೆಯ ಮೂರು ಕಡೆಯಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿದೆ.

ಪ್ರಕರಣ ೧:

ಕುಂದಾಪುರದ ಕಸಬಾ ಎಂಬಲ್ಲಿ APMC ಮಾರ್ಕೇಟ್‌ ಯಾರ್ಡ ಒಳಗಡೆ ಗನಿಸಾಹೇಬ್‌ ಜನರಲ್‌ ಮರ್ಚೆಂಟ್‌ ಎಂಬ ದಿನಸಿ ಅಂಗಡಿ ವ್ಯವಹಾರ ಮಾಡುತ್ತಿದ್ದು, ಎಂದಿನಂತೆ ದಿನಾಂಕ ಜೂನ್ 12  ರಂದು ಸಂಜೆ 7:00 ಗಂಟೆಗೆ ಅಂಗಡಿಯನ್ನು ಮುಚ್ಚಿ ಬಾಗಿಲು ಹಾಕಿ ಹೋಗಿದ್ದು ದಿನಾಂಕ 13/06/2024 ರಂದು ಬೆಳಿಗ್ಗೆ 09:00 ಗಂಟೆಗೆ ಅಂಗಡಿಗೆ ಬಂದು ಶೇಟರ್‌ ಬಾಗಿಲು ತೆಗೆದು ಒಳಗಡೆ ಹೋದಾಗ ಅಂಗಡಿಯ ಮೇಲ್‌ ಚಾವಣಿಯ ಸಿಮೆಂಟ್‌ ಶೀಟ್‌ ಒಡೆದುಹೋಗಿರುವುದು ಕಂಡು ಬಂದಿದ್ದು, ಅಂಗಡಿಯ ಕ್ಯಾಶ್‌ ಡ್ರಾವರ್‌ ನಲ್ಲಿರುವ 20,000/- ರೂಪಾಯಿ ನಗದು ಹಣ, ಮೊಬೈಲ್‌ ಪೋನ್‌-2 ಹಾಗೂ ಡಿವಿಯಾರ್‌ ಮೆಶೀನ್‌(Hikvigen) ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2024 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ 2:

ಕೋಟ:  ಮಿಥುನ್‌ ಮಬುವವರು ಮಾವ ರಮೇಶ್‌ ರವರ ಮನೆಗೆ ಬಂದಿದ್ದು ಜೂನ್ 12 ರಂದು ಸಂಜೆ ವೇಳೆಗೆ ತೆಕ್ಕಟ್ಟೆ ಪೇಟೆಗೆ ಕೆಲಸದ ನಿಮಿತ್ತ ಮಾವ ರಮೇಶ್‌ ರವರ KA-20-ES-3589 ನೇ ಸುಜುಕಿ ಆಕ್ಸಿಸ್‌ ಸ್ಕೂಟಿಯನ್ನು ತೆಗೆದುಕೊಂಡು ಹೋಗಿ ನಂತರ ಮನೆಗೆ ಬಂದು ತೆಕ್ಕಟ್ಟೆಯ ಮಾವನ ಮನೆಯ ಅಂಗಳದಲ್ಲಿ 6:30 ಗಂಟೆಗೆ ಇಟ್ಟಿದ್ದು, ಗಡಿಬಿಡಿಯಲ್ಲಿ ಮೋಟಾರ್‌ ಸೈಕಲಿನ ಕೀಯನ್ನು ಅದರಲ್ಲಿಯೇ ಇಟ್ಟಿರುತ್ತಾರೆ.

ದಿನಾಂಕ 13/06/2024 ರಂದು ಬೆಳಿಗ್ಗೆ 06:00 ಗಂಟೆಗೆ ನೋಡುವಾಗ ಅಂಗಳದಲ್ಲಿ ಇಟ್ಟಿದ್ದ ಸ್ಕೂಟಿ ಇಲ್ಲದೇ ಇದ್ದು ಅಕ್ಕಪಕ್ಕದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ದಿನಾಂಕ 12/06/2024 ರಂದು ಸಂಜೆ 18:30 ರಿಂದ ದಿನಾಂಕ 13/06/2024 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2024 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ 3:

ಕೋಟ: ಪಯೋಗೀಶ್‌ (33), ತೆಕ್ಕಟ್ಟೆ, ಕುಂದಾಪುರ ಇವರು ತೆಕ್ಕಟ್ಟೆಯಲ್ಲಿರುವ ಗಣೇಶ್‌ ವೈನ್ಸ್‌ನಲ್ಲಿ ಮೆನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 12/06/2024 ರಂದು ರಾತ್ರಿ 10:30 ಗಂಟೆಗೆ ಬಂದ್‌ ಮಾಡಿದ್ದು, ದಿನಾಂಕ 13/06/2024 ರಂದು ಬೆಳಿಗ್ಗೆ 07:00 ಗಂಟೆ ಸಮಯಕ್ಕೆ ವೈನ್‌ ಶಾಪ್‌ನ ಶೆಟರ್‌ ಅರ್ಧಕ್ಕೆ ತೆರೆದಿರುವುದಾಗಿ ಮಾಹಿತಿ ತಿಳಿದು ವೈನ್‌ ಶಾಪ್‌ಗೆ ಬಂದು ನೋಡಿದಾಗ ಬೀಗವನ್ನು ಒಡೆಯದೆ ಶೆಟರ್‌ನ್ನು ಯಾವುದೋ ಆಯುಧದಿಂದ ಮೀಟಿ ಮೇಲಕ್ಕೆ ಎತ್ತಿ ಒಳಪ್ರವೇಶಿಸಿರುವುದು ಕಂಡುಬಂದಿದೆ.

ಒಳಗೆ ಹೋಗಿ ನೋಡಿದಾಗ ಕ್ಯಾಶ್‌ ಡ್ರಾವರ್‌ ತೆರೆದಿದ್ದು, ಅದರಲ್ಲಿರುವ ಚಿಲ್ಲರೆ ಹಣ ಹಾಗೂ ಅಲ್ಲಿಯೇ ಮೇಲೆ ಇದ್ದ ದೇವರ ಕಾಣಿಕೆ ಹುಂಡಿಯ 2000/- ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಅಲ್ಲದೆ ಮದ್ಯದ ಬಾಟಲಿಗಳನ್ನು ಇಡುವ ಶೋಕೇಸ್‌ನಲ್ಲಿ ನೋಡಿದಾಗ 5,000/- ಮೌಲ್ಯದ ಮದ್ಯದ ಬಾಟಲಿ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  143/2024 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button