ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಹೆಸರು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಅಖಿಲ ಕೊಡವ ಸಮಾಜ ಮನವಿ

ಪದ್ಮಶ್ರೀ ಪುರಸ್ಕೃತ ರೋಹನ್ ಬೊಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.

ಮಡಿಕೇರಿ ನಗರಸಭಾ ಅಧ್ಯಕ್ಷ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದ ಸಮಾಜದ ಪ್ರಮುಖರು ವಿಶ್ವದ ಡಬ್ಬಲ್ ಮೆನ್ಸ್ ಟೆನ್ನಿಸ್ ಕ್ರೀಡಾಯಲ್ಲಿ ದಾಖಲೆ ಮೆರೆದ ಗೌರವಾರ್ಥ ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಮಾಡಿದರು.

ಮನವಿ ಅರ್ಪಿಸಿದ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ಜಂಟಿ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್ ಹಾಗೂ ನಂದೇಟಿರ ರಾಜ ಮಾದಪ್ಪ ಹಾಜರಿದ್ದರು…

ಇದುಕ್ಕು ಮೊದಲು ರೋಹನ್ ಬೋಪಣ್ಣ ಅವರ ಸ್ವಗ್ರಾಮವಾದ ಮಾದಾಪುರದ ಅವರ ಮನೆಗೆ ಭೇಟಿ ನೀಡಿ ಮಗನ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Latest Indian news

Popular Stories