ಅಜೆಕಾರು: ಪೊಲೀಸ್ ರೌಂಡ್ಸ್ ಸಂದರ್ಭದಲ್ಲಿ “ಡ್ರ್ಯಾಗರ್” ಇಟ್ಟು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವಾಹನ – ಪ್ರಕರಣ ದಾಖಲು

ಅಜೆಕಾರು: ವಾಹನದಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೇ 30 ರಂದು ರವಿ ಬಸಪ್ಪ ಕಾರಗಿ , ಪೊಲೀಸ್ ಉಪ ನಿರೀಕ್ಷಕರು (ಕಾ ಮತ್ತು ಸು), ಅಜೆಕಾರು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರು ರಾತ್ರಿ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಕೈಕಂಬ ಬಳಿ ಒಂದು ವಾಹನ ಸಂಶಯಸ್ಪಾದ ರೀತಿಯಲ್ಲಿ ಬರುತ್ತಿರುವುದನ್ನು ಕಂಡು ನಿಲ್ಲಿಸಲು ಸೂಚನೆ ನೀಡಿದ್ದಾರೆ‌.

ಆದರೆ ವಾಹನವನ್ನು ನಿಲ್ಲಿಸದೇ ಹೋಗಿದ್ದು, ಕೂಡಲೇ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ತಡೆದು ನಿಲ್ಲಿಸಿದಾಗ ವಾಹನವನ್ನು ಚಲಾಯಿಸುತ್ತಿದ್ದ ಚಾಲಕ ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದಾನೆ.

ವಾಹನದ ಹತ್ತಿರ ಹೋಗಿ ನೋಡಿದಾಗ ಬಿಳಿ ಬಣ್ಣದ ಬೊಲೆರೋ ವಾಹನವಾಗಿದ್ದು ಇದರ ನಂಬ್ರ KA-19-MB-8753 ಆಗಿದ್ದು ವಾಹನದ ಒಳಗಡೆ ಪರಿಶೀಲಿಸಿದಾಗ ಹರಿತವಾದ 1 ಡ್ರ್ಯಾಗರ್ ಇದ್ದು, ಯಾವುದೋ ಕೃತ್ಯ ನಡೆಸುವ ಉದ್ದೇಶವನ್ನು ಇಟ್ಟುಕೊಂಡು ವಾಹನದಲ್ಲಿ ತಿರುಗುತ್ತಿದ್ದ ಎಂದು ಅನುಮಾನ ಮೂಡಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2024 ಕಲಂ: 511 ಐಪಿಸಿ ಮತ್ತು 25(1)(b) ಐ.ಎ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

Latest Indian news

Popular Stories