ಬಾವಿಗೆ ಜಿಗಿದ ತಂಗಿ ಕಾಪಾಡಲು ನೀರಿಗೆ ಹಾರಿ ಪ್ರಾಣ ಬಿಟ್ಟ ಅಣ್ಣ

ಕಲಬುರಗಿ: ಮದುವೆಯ ವಿಚಾರದಲ್ಲಿ ಮನೆಯಲ್ಲಿ ನಡೆದ ಗಲಾಟೆಯಿಂದ ಅಣ್ಣ ಮತ್ತು ತಂಗಿ ಬಾವಿಗೆ ಹಾರಿ ಪ್ರಾಣ ಬಿಟ್ಟ
ಘಟನೆ ಕಲಬುರಗಿಯಲ್ಲಿ ನಡೆದಿದೆ.

ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು. ​​ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಅಣ್ಣ, ತಂಗಿ ಇಬ್ಬರೂ ಮೃತಪಟ್ಟಿದ್ದಾರೆ.

ನಂದಿನಿ ಸಣ್ಣ-ಪುಟ್ಟ ವಿಚಾರಕ್ಕೂ ಹಠ ಮಾಡುತ್ತಿದ್ದಳು. ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದ. ಇಷ್ಟಕ್ಕೇ ನೊಂದಿಕೊಂಡ ನಂದಿನಿ ಮನೆ ಬಳಿಯಿದ್ದ ಬಾವಿಗೆ ಹಾರಿದ್ದಾಳೆ. ತಂಗಿ ಬಾವಿಗೆ ಜಿಗಿದಿದ್ದು ತಿಳಿಯುತ್ತಿದ್ದಂತೆ ತಂಗಿ ಕಾಪಾಡಲು ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.

ಬಾವಿಯ ದಡದಲ್ಲಿ ನಂದಿನಿ ತಲೆಗೆ ಹೂವಿನ ಗೊಂಚಲು ಮುಡಿದುಕೊಂಡದ್ದು ನೀರಿನಲ್ಲಿ ತೇಲುತ್ತಿರುವುದು ಗಮನಿಸಿದ ಹೆತ್ತವರು ಅನುಮಾನಗೊಂಡು ಕಾರ್ಯಾಚರಣೆ ನಡೆಸಿದ ನಂತರ ಬಾವಿಯಲ್ಲಿ ಅಣ್ಣ ತಂಗಿಯ ಶವ ಪತ್ತೆಯಾಗಿದೆ.

Latest Indian news

Popular Stories