ನರೇಗಾ ಕಾಮಗಾರಿ ವೀಕ್ಷಿಸಿದ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್

ಹೊಸಪೇಟೆ(ವಿಜಯನಗರ),ಜು.09(ಕರ್ನಾಟಕ ವಾರ್ತೆ): ಅರಣ್ಯ ಇಲಾಖೆ, ತಾಪಂ ಮತ್ತು ಗ್ರಾಪಂ ಹಾಗೂ ನರೇಗಾ ಯೋಜನೆಯಡಿ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗೂಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಹಂದಿಗುಡ್ಡದಲ್ಲಿ ಕೈಗೊಂಡಿರುವ ಕಾಂಟೂರ್ ಟ್ರೆಂಚ್ ಕಾಮಗಾರಿಯ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ್ ಶ್ರವಣ್ ಅವರು ಶುಕ್ರವಾರ ಪರಿಶೀಲಿನೆ ನಡೆಸಿದರು.
ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಅನೇಕ ಗುಡ್ಡಗಳು ಬರಲಿದ್ದು, ಪ್ರಸ್ತುತ ನರೇಗಾ ಯೋಜನೆಯಡಿ ಗೂಂಡಾ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಣ್ಣಿನ ಸವಕಳಿ ತಡೆಯುವ ಮತ್ತು ಗುಡ್ಡದ ಹಸಿರೀಕರಣದ ಕಾರ್ಯ ಕೈಗೊಳ್ಳಲಾಗಿದೆ. ಹಂದಿ ಗುಡ್ಡ ಅಭಿವೃದ್ಧಿಗೆ ನರೇಗಾ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಿಂದ ಕಲ್ಲಹಳ್ಳಿ ಹಾಗು ರಾಜಾಪುರ ಗ್ರಾಮದ 300 ಜನ ಕೂಲಿಕಾರರಿಗೆ ಉದ್ಯೋಗ ನೀಡುವುದರ ಜೊತೆಗೆ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ವಿಶ್ವನಾಥ್, ನರೇಗಾ ಸಹಾಯಕ ನಿರ್ದೇಶಕರಾದ ಎಂ.ಉಮೇಶ್ ಅರಣ್ಯ ಇಲಾಖೆಯ ವಿನಯ್ ಕೆಸಿ, ಪಿಡಿಒ ಉಮಾ ಕಾಳೆ, ಕಲ್ಲಹಳ್ಳಿ ಗ್ರಾಪಂ ಸದಸ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಇತರರು ಇದ್ದರು.

Latest Indian news

Popular Stories

error: Content is protected !!