ಅನ್ನಪೂರ್ಣಿ ಚಲನಚಿತ್ರ | ಹಿಂದುಗಳಲ್ಲಿ ನಟಿ ನಯನತಾರಾ ಕ್ಷಮೆಯಾಚನೆ

ನವದೆಹಲಿ, ಜನವರಿ 19: ‘ಅನ್ನಪೂರ್ಣಿ’ ಆಹಾರ ದೇವತೆ ಸಿನಿಮಾದಲ್ಲಿ ಶ್ರೀರಾಮನಿಗೆ ಅಗೌರವ ಮತ್ತು ‘ಲವ್ ಜಿಹಾದ್’ ಪ್ರಚಾರದ ಆರೋಪದಲ್ಲಿ ಸಿನಿಮಾದ ನಟಿ ನಯನತಾರಾ ಟೀಕೆಗೆ ಒಳಗಾಗಿದ್ದರು. ಇದೀಗ ಅವರು ಹಿಂದೂಗಳ ಭಾವನೆ ಕುರಿತು ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದ್ದಾರೆ.

ನಯನತಾರಾ ಗುರುವಾರ ರಾತ್ರಿ ಇನ್ಸ್‌ಟಾಗ್ರಾಮ್‌ನಲ್ಲಿ ಕ್ಷಮೆ ಕುರಿತು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಸಿನಿಮಾ ಕುರಿತು ಮಾತನಾಡಿರುವ ಅವರು, ”ನಾನು ಈ ಟಿಪ್ಪಣಿಯನ್ನು ಭಾರವಾದ ಹೃದಯದಿಂದ ಮತ್ತು ನಮ್ಮ ‘ಅನ್ನಪೂರ್ಣಿ’ ಚಿತ್ರಕ್ಕೆ ಸಂಬಂಧಿಸಿದ ಇತ್ತೀಚಿನ ಘಟನೆಗಳನ್ನು ತಿಳಿಸುವ ನಿಜವಾದ ಬಯಕೆಯಿಂದ ಬರೆಯುತ್ತಿದ್ದೇನೆ” ಎಂದು ಆರಂಭಿಸಿದ್ದಾರೆ. ”ಅನ್ನಪೂರ್ಣಿ’ ಸಿನಿಮಾ ರಚಿಸುವುದು ಕೇವಲ ಸಿನಿಮೀಯ ಪ್ರಯತ್ನವಾಗಿರಲಿಲ್ಲ. ದೃಢತೆ ಪ್ರೇರೇಪಿಸುವ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವವನ್ನು ತುಂಬುವ ಹೃತ್ಪೂರ್ವಕ ಅನ್ವೇಷಣೆಯಾಗಿದೆ.

ಈ ಚಿತ್ರವು ಜೀವನದ ಪ್ರಯಾಣವನ್ನು ಪ್ರತಿಬಿಂಬಿಸುವ ಗುರಿಹೊಂದಿದೆ.” ಓಟಿಟಿಯಿಂದ ‘ಅನ್ನಪೂರ್ಣಿ’ ಔಟ್ ಅನಿರೀಕ್ಷಿತ ”ಸಕಾರಾತ್ಮಕ ಸಂದೇಶವನ್ನು ಹಂಚಿಕೊಳ್ಳಲು ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ, ನಾವು ಅಜಾಗರೂಕತೆಯಿಂದ ನೋವನ್ನು ಉಂಟು ಮಾಡಿರಬಹುದು. OTT ಪ್ಲಾಟ್‌ಫಾರ್ಮ್‌ನಿಂದ ಈ ಹಿಂದೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾದ ಸೆನ್ಸಾರ್ ಮಾಡಿದ ಚಲನಚಿತ್ರವನ್ನು ತೆಗೆದುಹಾಕುತ್ತಾರೆ ಎಂಬುದನ್ನು ನಾವು ನಿರೀಕ್ಷಿಸಿರಲಿಲ್ಲ.

ಕಳೆದ ಎರಡು ದಶಕಗಳಲ್ಲಿ, ಚಲನಚಿತ್ರೋದ್ಯಮದಲ್ಲಿದ್ದೇನೆ. ಈವರೆಗಿನ ನನ್ನ ಪಯಣವು ಸಕಾರಾತ್ಮಕ, ಧನಾತ್ಮಕ ಉದ್ದೇಶ ಹರಡಲು, ಪರಸ್ಪರ ಕಲಿಯಲು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ‘ಅನ್ನಪೂರ್ಣಿ’ ಡಿಸೆಂಬರ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲು ಪ್ರಾರಂಭಿಸಿದಾಗ ಟೀಕೆಗೆ ಗುರಿಯಾಯಿತು. ಚಲನಚಿತ್ರದ ವಿರುದ್ಧ ಹಲವಾರು ಪೊಲೀಸ್ ದೂರುಗಳನ್ನು ದಾಖಲಾದ ಬಳಿಕ ಇದೀಗ ಆ ಸಿನಿಮಾವನ್ನು OTT ವೇದಿಕೆಯಿಂದ ತೆಗೆದು ಹಾಕಲಾಗಿದೆ.

ದೇವಸ್ಥಾನದ ಅರ್ಚಕರ ಮಗಳಾಗಿ ನಟಿಸಿರುವ ನಯನತಾರಾ ಬಿರಿಯಾನಿ ಮಾಡುವ ಮುನ್ನ ಹಿಜಾಬ್ ಧರಿಸಿ ನಮಾಜ್ ಮಾಡುವ ದೃಶ್ಯವಿದೆ. ಇದು ಸೇರಿದಂತೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶಗಳಿವೆ ಎಂದು ಕೆಲವು ದೃಶ್ಯಗಳನ್ನು ಸೇರಿದ ದೂರು ನೀಡಲಾಗಿದೆ. ಇದೇ ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಟೀಕೆಗಳು, ದೂರುಗಳು ದಾಖಲಾಗುತ್ತಿದ್ದಂತೆ ಇದೀಗ ಸಿನಿಮಾದ ನಟಿ ನಯನತಾರಾ ಹಿಂದೂಗಳಲ್ಲಿ ಕ್ಷಮೆಯಾಚಿಸಿದ್ದಾರೆ.

Latest Indian news

Popular Stories