ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗೋಡ್ಲು ಗ್ರಾಮದ ನಿವಾಸಿಯಾದ ಶ್ರೀ ಚಿದಾನಂದ ವೈ.ಎ. ಎಂಬುವವರು ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಸುಮಾರು 2500 ಕೆಜಿ ಹಸಿ ಕಾಫಿಯಲ್ಲಿ ಅಂದಾಜು 350 ಕೆ.ಜಿ ತೂಕದ ಕಾಫಿಯನ್ನು ಜನವರಿ 31 ರಂದು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುವ ಬಗ್ಗೆ ದೂರು ನೀಡಲಾಗಿತ್ತು.
ಪ್ರಕರಣ ಸಂಬಂಧ ಇಂದು 08-02-2024 ಕಗ್ಗೋಡ್ಲುದ ಗ್ರಾಮ ನಿವಾಸಿಯಾದ 1) ಜಯ.ಎಂ.ಸಿ, 45 ವರ್ಷ, 2) ಶರತ್.ಹೆಚ್‌ಜಿ, 31 ವರ್ಷ, 3) ಸಾಜು.ಪಿಜೆ, 44 ವರ್ಷ ಮತ್ತು ಕಳ್ಳತನ ಮಾಡಿದ್ದ ಕಾಫಿಯನ್ನು ಮಡಿಕೇರಿ ನಗರದ ಜಿ.ಟಿ ವೃತ್ತದ ಬಳಿಯ ನೂರ್ ಟ್ರೇಡರ್‌ನಲ್ಲಿ ಯಾವುದೇ ರಶೀದಿ/ಬಿಲ್ ಇಲ್ಲದೇ ಖರೀದಿ ಮಾಡಿರುವ ಅಬ್ದುಲ್ ಅಜೀಜ್, 49 ವರ್ಷ ಎಂಬುವವರನ್ನು ಬಂಧಿಸಲಾಗಿದೆ. ಕಳ್ಳತನ ಮಾಡಿದ್ದ 150 ಕೆ.ಜಿ ಕಾಫಿ ಚೀಲಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
ಕಗ್ಗೋಡ್ಲು ಗ್ರಾಮಾದ ಕಿಶೋರ್ ಕುಮಾರ್.ಕೆ.ಎಂ ಮತ್ತು ಮನು ರೈ ಎಂಬುವವರು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಆರೋಪಿಗಳನ್ನು ಪತ್ತೆ ಹಚ್ಚಲು ಮಹೇಶ್‌ಕುಮಾರ್.ಎಸ್, ಡಿವೈಎಸ್‌ಪಿ, ಮಡಿಕೇರಿ ಉಪವಿಭಾಗ, ಉಮೇಶ್ ಯು. ಪಿಐ ಮತ್ತು ಶ್ರೀನಿವಾಸಲು.ವಿ, ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿಯವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ರವರು ಶ್ಲಾಘಿಸಿದ್ದಾರೆ.
ಜಿಲ್ಲೆ ಯಾವುದೇ ಕಾಫಿ ಟ್ರೇಡರ್ಸ್ ರವರು ಕಾಫಿ ಖರೀದಿ ಸಂದರ್ಭ ರಶೀದಿ/ಬಿಲ್ಲನ್ನು ನೀಡದೇ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟುಕೊಳ್ಳದೇ ವ್ಯವಹಾರ ನಡೆಸಿದಲ್ಲಿ ಹಾಗೂ ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲೀಕರನ್ನು ನೇರ ಹೋಣಗಾರರನ್ನಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.