ಅಫ್ಘಾನಿಸ್ತಾನದಲ್ಲಿ ಭಾರತೀಯ ಪತ್ರಕರ್ತನ ಹತ್ಯೆ

ಅಫ್ಘಾನಿಸ್ತಾನದ ಕಂದಹಾರ್‌ನ ಬೋಲ್ಡಕ್ ಜಿಲ್ಲೆಯ ಸ್ಪಿನ್ನಲ್ಲಿ ನಡೆಯುತ್ತಿರುವ ಘರ್ಷಣೆಯನ್ನ ಚಿತ್ರೀಕರಿಸುತ್ತಿದ್ದ ವೇಳೆ ರಾಯಿಟರ್ಸ್ ಮುಖ್ಯ ಫೋಟೋಗ್ರಾಫರ್, ಭಾರತೀಯ ಪತ್ರಕರ್ತ ಡ್ಯಾನಿಷ್ ಸಿದ್ದಿಕಿಯನ್ನ ಹತ್ಯೆಗೈಯಲಾಗಿದೆ. ಪುಲ್ಟಿಜೆರ್ ಪ್ರಶಸ್ತಿ ಸ್ವೀಕರಿಸಿದ್ದ ಪತ್ರಕರ್ತ ಸಿದ್ದಿಕಿ ಕಳೆದ ಕೆಲ ದಿನಗಳಿಂದ ಕಂದಹಾರ್ ಘರ್ಷಣೆಯನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.
ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಈ ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ಕಂದಹಾರ್ ಜಿಲ್ಲೆಯಲ್ಲಿ ಸ್ನೇಹಿತರ ಡ್ಯಾನಿಷ್ ಸಿದ್ದಿಕಿಯನ್ನ ಹತ್ಯೆ ಮಾಡಿದ ವಿಚಾರ ತಿಳಿದು ದುಃಖಿತನಾಗಿದ್ದೇನೆ. ಭಾರತೀಯ ಪತ್ರಕರ್ತ ಹಾಗೂ ಪುಲ್ಟಿಜೆರ್ ಪ್ರಶಸ್ತಿ ಪುರಸ್ಕೃತನ ಮೇಲೆ ಭಯೋತ್ಪಾದಕರು ದಾಳಿ ಮಾಡುವ ವೇಳೆ ಅವರು ಅಫ್ಘನ್ ಭದ್ರತಾ ಸಿಬ್ಬಂದಿ ಜೊತೆಯಿದ್ದರು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!