ಬೀದರ್(ಭಾಲ್ಕಿ): ಮಲತ್ಯಾಜ್ಯ ಸಂಸ್ಕರಣ ಘಟಕಕ್ಕೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

ಬೀದರ್,ನ.23: ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಇತ್ತೀಚೆಗೆ ಭಾಲ್ಕಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಭಾಲ್ಕಿ ಹೊರವಲಯದಲ್ಲಿರುವ ಖಂಡ್ರೆ ತಾಂಡಾ ಹತ್ತಿರದಲ್ಲಿ ಅಂದಾಜು 2.7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಮಲತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯದಲ್ಲಿ ಬೆಂಗಳೂರಿನಲ್ಲಿ ದೇವನಹಳ್ಳಿಯಲ್ಲಿ ಬಿಟ್ಟರೆ ಎರಡನೇಯದಾಗಿ ಉತ್ತರ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಮಾತ್ರ ಇಂತಹ ಘಟಕ ನಿರ್ಮಾಣವಾಗುತ್ತಿದೆ. ಕೋವಿಡ್-19 ಹಾಗೂ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಭಾಲ್ಕಿ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಭೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಮಲತ್ಯಾಜ್ಯ ಸಂಸ್ಕರಣ ಘಟಕದ ಯೋಜನೆಯ ಸಮಾಲೋಚಕರಾದ ಶ್ರೀ ಮತಿ ಸಂದ್ಯಾ ಹಾಗೂ ಕಾರ್ತಿಕ ಮತ್ತು ಕೆಆರ್‍ಐಡಿಎಲ್ ಅಭಿಯಂತರರರಾದ ರಮೇಶ ಜಾದವ್ ಹಾಗೂ ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾzದ ಶರಣಬಸಪ್ಪ ಕೋಟಪ್ಪಗೋಳ ಅವರೊಂದಿಗೆ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಚರ್ಚಿಸಿದರು. ನಿಂತು ಹೋದ ಕಾಮಗಾರಿಯನ್ನು ಪುನಃ ತುರ್ತಾಗಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಈ ಸಂಸ್ಕರಣಾ ಘಟಕಕ್ಕೆ ಬರುವ ಮಲತಾಜ್ಯವು ಬಳಿಕ ಗೊಬ್ಬರವಾಗಿ ಪರಿವರ್ತನೆಯಾಗಲಿದ್ದು, ಇದು ಜಮೀನುಗಳಿಗೆ ಅತ್ಯುಪಯುಕ್ತವಾಗಿರಲಿದೆ. ಪರಿಸರ ಸ್ನೇಹಿ ಪ್ರೊಜೆಕ್ಟ್ ಇದಾಗಿದೆ ಎಂದು ಪುರಸಭೆಯ ಪರಿಸರ ಅಭಿಯಂತರರಾದ ವೀರಶೆಟ್ಟಿ, ಕಿರಿಯ ಅಭಿಯಂತರರಾದ ಮಹಾದೇವ್ ಹಾಗೂ ಇನ್ನೀತರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

Latest Indian news

Popular Stories