ಮಾದಾಪುರ ಸಮೀಪ ನಂದಿ ಮೊಟ್ಟೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ(ಕಾಟಿ) ಬೇಟೆ | ಓರ್ವನ ಬಂಧನ

ಮಾದಾಪುರ ಸಮೀಪದ ನಂದಿ ಮೊಟ್ಟೆಯಲ್ಲಿ 539 ಕೆ.ಜಿ ಕಾಡುಕೋಣ ಮಾಂಸ ಪತ್ತೆಯಾಗಿದೆ. ಆರೋಪಿ ಓರ್ವನ ಬಂಧನವಾಗಿದೆ.

ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ನನ್ನು ಬಂಧಿಸಲಾಗಿದೆ.
ವಾಹನವನ್ನು ಬೆನ್ನಟ್ಟುವ ಸಂಧರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಪರಾರಿಯಾಗಿದ್ದಾನೆ.
ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದೆ.

ತಡರಾತ್ರಿ ಅಪ್ಪಂಗಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಮಗೆ ದೊರೆತ ಖಚಿತ ವರ್ತಮಾನದ ಮೇಲೆ ವಾಹನವನ್ನ ಬೆನ್ನಟಿ ಹಿಡಿದಿದ್ದಾರೆ .ಬಂಧಿತರಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ.

Latest Indian news

Popular Stories