ಬೆಂಗಳೂರು,ಜ.12:- ಸೆರಮ್ ಇನ್ಸ್‍ಟಿಟ್ಯೂಟ್‍ನಿಂದ ಕೊವಿಶೀಲ್ಡ್ ಲಸಿಕೆ ಪೂರೈಕೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ಪಡೆಯುವುದಕ್ಕೆ ರಾಜ್ಯದಲ್ಲಿ ಈಗಾಗ್ಲೇ ಅನೇಕ ಜನರು ನೋಂದಣಿ ಮಾಡಿಕೊಂಡಿದ್ದು ಅವರ ಪಟ್ಟಿ ಹೀಗಿದೆ.
- ದಾವಣಗೆರೆ ಜಿಲ್ಲೆಯಲ್ಲಿ 18,447 ಜನರಿಂದ ನೋಂದಣಿ
- ಚಾಮರಾಜನಗರ ಜಿಲ್ಲೆಯಲ್ಲಿ 6,250 ಜನರಿಂದ ನೋಂದಣಿ
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಸಾವಿರ ಜನರಿಂದ ನೋಂದಣಿ
- ಕಲಬುರಗಿ ಜಿಲ್ಲೆಯಲ್ಲಿ 17,400 ಜನರಿಂದ ನೋಂದಣಿ
- ಗದಗ ಜಿಲ್ಲೆಯಲ್ಲಿ 8,877 ಜನರಿಗೆ ಲಸಿಕೆ ನೀಡಲು ಸಿದ್ಧತೆ
- ಕೊಪ್ಪಳ ಜಿಲ್ಲೆಯಲ್ಲಿ 10,335 ಜನರಿಗೆ ಲಸಿಕೆ ನೀಡಲು ಸಿದ್ಧತೆ
- ಚಿತ್ರದುರ್ಗ ಜಿಲ್ಲೆಯಲ್ಲಿ 15,580 ಜನರಿಗೆ ವ್ಯಾಕ್ಸಿನೇಷನ್
- ಬಾಗಲಕೋಟೆ ಜಿಲ್ಲೆಯಲ್ಲಿ 16 ಸಾವಿರ ಜನರಿಗೆ ವ್ಯಾಕ್ಸಿನ್
- ಬೀದರ್ ಜಿಲ್ಲೆಯಲ್ಲಿ 9,200 ಜನರಿಗೆ ಲಸಿಕೆ ನೀಡಲು ಸಿದ್ಧತೆ
- ವಿಜಯಪುರ ಜಿಲ್ಲೆಯಲ್ಲಿ 15,307 ಜನರಿಗೆ ವ್ಯಾಕ್ಸಿನ್
- ಮಂಡ್ಯ ಜಿಲ್ಲೆಯಲ್ಲಿ 13,531 ಜನರಿಂದ ನೋಂದಣಿ