ಬ್ರಹ್ಮಾವರ: ನಕಲಿ ಇನ್ವೈಸ್ ಬಳಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳ ಖರೀದಿಸಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ
ದೂರುದಾರ ಶ್ರೇಯಸ್ (30) ಉಪ್ಪುಂದ, ಬೈಂದೂರು ಇವರ ಬೈಂದೂರಿನ State Bank of India, Yedthare ಶಾಖೆಯ ಖಾತೆಯಿಂದ ಅವರ ಅರಿವಿಗೆ ಬಾರದೇ ಅವರ ಹೆಸರಿನಲ್ಲಿ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿರುವ ಬಜಾಜ್ ಫೈನ್ಯಾನ್ಸ್ ನಲ್ಲಿ ಹರ್ಷ ಶೋ ರೂಮ್ ನ Invoice No. G2OVI00098 ರಲ್ಲಿ ರೂಪಾಯಿ 61,400/- ಮೌಲ್ಯದ Samsung Refrigarator ಮತ್ತು Invoice No. G1OVI00282 ರಲ್ಲಿ ರೂಪಾಯಿ 2,10,000/- ಮೌಲ್ಯದ Sony LED X65A8DL TV ಯನ್ನು ಸಾಲದ ಕಂತಿನಲ್ಲಿ ಪಡೆದ ಹಾಗೆ ತೋರಿಸಿ, ನಂತರ ಬ್ರಹ್ಮಾವರ ಹರ್ಷ ಶೋ ರೂಮ್ ನಲ್ಲಿ ಅದೇ Invoice No. G2OVI00098 ರಲ್ಲಿ ರೂಪಾಯಿ 61,400/- ಮೌಲ್ಯದ Iphone 14 ಮತ್ತು Invoice No. G1OVI00282 ರಲ್ಲಿ ರೂಪಾಯಿ 1,49,900/- ಮೌಲ್ಯದ Iphone 15 pro max ಸ್ವತ್ತುಗಳನ್ನು ಖರೀದಿಸಿ ದಿನಾಂಕ 02/05/2024 ರಿಂದ ದಿನಾಂಕ 02/08/2024 ರವರೆಗೆ ದೂರುದಾರರ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂಪಾಯಿ 38,335/- ಹಣವನ್ನು ಬ್ರಹ್ಮಾವರದ ಬಜಾಜ್ ಫೈನ್ಯಾನ್ಸ್ ನವರು ಸಾಲದ ಕಂತಿನ ಹೆಸರಿನಲ್ಲಿ ಪಡೆದಿರುತ್ತಾರೆ ಎಂದು ಆರೋಪಿಸಲಾಗಿದೆ.
ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 205/2024 ಕಲಂ: 340(2), 336(2), 336(3), 319 BNS ರಂತೆ ಪ್ರಕರಣ ದಾಖಲಾಗಿರುತ್ತದೆ.