ಬೈಂದೂರು: ಲಕ್ಷಾಂತರ ಮೌಲ್ಯದ ರಾಣಿ ಬಲೆಯ ಹಿತ್ತಾಳೆ ರಿಂಗ್ ಕಳ್ಳತನ ಪ್ರಕರಣ | ಆರೋಪಿ ಬಂಧನ

ಬೈಂದೂರು ಠಾಣಾ ವ್ಯಾಪ್ತಿಯ ಕರ್ಕಿ ಕಳಿ ಎಡ ಮಾವಿನ ಹೊಳೆ ಸಮೀಪ ನಿಲ್ಲಿಸಿದ್ದ ದೋಣಿಯಲ್ಲಿರುವ ಬಲೆಯ ಹಗ್ಗವನ್ನು ತುಂಡರಿಸಿ 95 ಹಿತ್ತಾಳೆ ರಿಂಗ್ ಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಬೈಂದೂರು ಠಾಣ ಪಿಎಸ್ಐ ಮತ್ತು ತಂಡ ಯಶಸ್ವಿಯಾಗಿದೆ.

ರಾಣಿ ಬಲೆ ದೋಣಿಯ ಸುಮಾರು ಒಂದು‌ಲಕ್ಷ ಮೌಲ್ಯದ ಬಲೆಯನ್ನು ಮಾರ್ಚ್ 16 ರಂದು‌ ಕಳ್ಳರು ಕಳ್ಳತನ ಮಾಡಿದ್ದರು. ಇದೀಗ ಪೊಲೀಸರು ಆರೋಪಿ
ಮಹೇಶ್ ಖಾರ್ವಿ (30 ವರ್ಷ)ಯನ್ನು ಬಂಧಿಸಿ 95 ರಿಂಗ್ ವಶಪಡಿಸಿಕೊಂಡಿದ್ದಾರೆ.

ಮಾನ್ಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಎಸ್.ಟಿ.ಸಿದ್ದಲಿಂಗಪ್ಪ ಹಾಗೂಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ರವರ ಇವರ ನಿರ್ದೇಶನದಲ್ಲಿ, ಶ್ರೀ ಬೆಳ್ಳಿಯಪ್ಪಕೆ.ಯು ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶ್ರೀ ಸವಿತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪ್ರಿಯಂವದಾ
ಪ್ರೋಬೇಷನರಿ ಐಪಿಎಸ್, ಶ್ರೀ ತಿಮ್ಮೇಶ್ ಬಿ.ಎನ್ ಪಿ.ಎಸ್.ಐ. (ಕಾ.ಸು ) ಹಾಗೂ ಮಹೇಶ ಕಂಬಿ ಪಿ.ಎಸ್.ಐ, ಸೂರ ನಾಯ್ಕ ಎಎಸ್ ಐ, ಮಹೆಚ್ ಸಿ ನಾಗಶ್ರೀ,ಅಪರಾಧ ವಿಭಾಗದ ಸಿಬ್ಬಂದಿಯವರಾದ, ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ, ರವರು ಸಹಕರಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ. ಅರುಣ ಕೆ, ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

Latest Indian news

Popular Stories