ಶಾಲೆಗೆ ನುಗ್ಗಿದ ಚಡ್ಡಿಗ್ಯಾಂಗ್ | 7.85 ಲಕ್ಷ ಕಳ್ಳತನ

ಮಿಯಾಪುರದಲ್ಲಿ ಚಡ್ಡಿಗ್ಯಾಂಗ್ ವೊಂದು ಹೈದರಾಬಾದ್‌ನ ಮಿಯಾಪುರದ ವರ್ಲ್ಡ್ ಒನ್ ಶಾಲೆಯಲ್ಲಿ ಶನಿವಾರ ಮಧ್ಯರಾತ್ರಿ ಕಳ್ಳತನ ನಡೆಸಿದೆ. ಇಬ್ಬರು ಕಳ್ಳರು ಚಡ್ಡಿಯಲ್ಲಿ ಕಳ್ಳತನ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೌಂಟರ್ ನಲ್ಲಿದ್ದ 7,85,000 ನಗದನ್ನು ಕಳ್ಳರು ದೋಚಿದ್ದಾರೆ ಎಂದು ವರದಿಯಾಗಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಆಧರಿಸಿ ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories