Crime

ಚಿಕ್ಕಬಳ್ಳಾಪುರ :ಗಾಳಿಗೆ ತೆಂಗಿನ ಮರ ಉರುಳಿ ಬಿದ್ದು, ಎರಡು ವರ್ಷದ ಮಗು ಮೃತ್ಯು, ಗರ್ಭಿಣಿ ಗಂಭೀರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಾಲಗಾನಹಳ್ಳಿ ಗ್ರಾಮ ಪಂಚಾಯಿತಿಯ ಎಚ್. ಕಾಲೊನಿಯಲ್ಲಿ ಭಾನುವಾರ ಮನೆಯ ಮುಂದಿನ ತೆಂಗಿನ ಮರ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ.

ಎರಡು ವರ್ಷದ ಪೃಥ್ವಿ ಮೃತಪಟ್ಟ ಮಗು. ಮೋನಿಕಾ ನಾಗರಾಜು ಎಂಬುವರು ಮನೆಯ ಮುಂದಿನ ತೆಂಗಿನ ಮರದ ಕೆಳಗೆ ತಮ್ಮ ಮಗುವನ್ನು ಆಟವಾಡಿಸುತ್ತಿದ್ದರು.

ಜೋರಾಗಿ ಬೀಸಿದ ಗಾಳಿಗೆ ತೆಂಗಿನ ಮರ ಅವರ ಮೇಲೆ ಉರುಳಿ ಬಿದ್ದಿದೆ. ಮರದ ಕೆಳಗೆ ಸಿಲುಕಿದ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಮಗುವಿನ ತಾಯಿ ಮೋನಿಕಾ (21) ಏಳು ತಿಂಗಳ ಗರ್ಭಿಣಿಯಾಗಿದ್ದು, ಆಕೆಯೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ನಡೆದ ತಕ್ಷಣ 108 ಆಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಿದರೂ ಆಂಬುಲೆನ್ಸ್‌ ತಡವಾಗಿ ಬಂತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button