ಬೀದರ್ ಜ.16:- ಬೀದರ್ ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಜನವರಿ 16ರಂದು ಕೋವಿಡ್-19 ಲಸಿಕಾ ನೀಡುವ ಪ್ರಕ್ರಿಯೆ ಅತ್ಯಂತ ಸುಸೂತ್ರವಾಗಿ ಜರುಗಿತು.
ಪ್ರಧಾನಮಂತ್ರಿಗಳಾದ ಮಾನ್ಯ ಶ್ರಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಲೇ ಬೀದರ ಜಿಲ್ಲೆಯ ಲಸಿಕಾ ಕೇಂದ್ರಗಳಲ್ಲಿ ಕೂಡ ಮೊದಲ ಸುತ್ತಿನಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.
ಬೀದರ ವೈಧ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಕೋವಿಡ್-19 ವ್ಯಾಕ್ಸಿನ್ ನೀಡಿಕೆ ಕೇಂದ್ರದಲ್ಲಿ
ಬೀದರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು.
ಒಟ್ಟು 540 ಜನ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ಹಾಕುವ ಗುರಿ ನಿಗದಿಪಡಿಸಲಾಗಿದ್ದು, ಈ ಪೈಕಿ 336 ಜನ ಆರೋಗ್ಯ ಸಿಬ್ಬಂದಿಯು ಜನವರಿ 16ರಂದು ಲಸಿಕೆ ಪಡೆದುಕೊಂಡರು.
ಬೀದರ ಜಿಲ್ಲೆಯಲ್ಲಿ ಕೋವಿಡ್ ಮಾಹಾಮಾರಿ ಸಂದರ್ಭದಲ್ಲಿ ಕೆಲಸ ನಿರ್ವಹಿಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಮೆಚ್ಚುಗೆಗಳಿಸಿದ್ದ ಬೀದರ ವೈಧ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ನೌಕರಳಾದ ಇಂದುಮತಿ ಮತ್ತು ಲ್ಯಾಬ್‍ಟೆಕ್ನಿಶನ್ ಸಿಬ್ಬಂದಿ ಉದಯಕುಮಾರ ಚಿಮಕೊಡ್ ಅವರಿಗೆ ಪ್ರಥಮವಾಗಿ ಕೋವಿಡ್-19 ಲಸಿಕೆ ನೀಡಿ ಚಾಲನೆ ನೀಡಲಾಯಿತು.
ಬ್ರಿಮ್ಸ್ ಆಸ್ಪತ್ರೆ ಬೀದರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಔರಾದ, ತಾಲೂಕು ಸಾರ್ವಜನಿಕ ಆಸ್ಪತ್ರೆ ಭಾಲ್ಕಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹುಮನಾಬಾದ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬಸವಕಲ್ಯಾಣ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಣದೂರ ಸೇರಿ 6 ಆರೊಗ್ಯ ಸಂಸ್ಥೆಗಳಲ್ಲಿ ಕೋವಿಡ್-19 ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಯಿತು.
ಲಸಿಕಾ ಅಭಿಯಾನ ಪರಿಶೀಲನೆ: ಆಣದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಳಾದ ಗ್ಯಾನೇಂದ್ರಕುಮಾರ ಗಂಗವಾರ ಅವರು ಜನವರಿ 16ರಂದು ಭೇಟಿ ನೀಡಿ ಲಸಿಕಾ ಅಭಿಯಾನ ಪರಿಶೀಲಿಸಿದರು.
ಹಂತಹಂತವಾಗಿ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಗುರಿ: ಇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಜಿಲ್ಲೆಯ 6 ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಗ್ರೂಪ್ ಡಿ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಹಂತಹಂತವಾಗಿ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಗುರಿ ಇದೆ ಎಂದು ತಿಳಿಸಿದರು.
ಅಡ್ಡಪರಿಣಾಮಗಳು ಆಗಿರುವುದಿಲ್ಲ: ಜನವರಿ 16ರಂದು ಲಸಿಕೆ ಪಡೆದುಕೊಂಡ ಯಾರಿಗೂ ಕೂಡಾ ತೀವ್ರತರವಾದ ಅಡ್ಡಪರಿಣಾಮಗಳು ಆಗಿರುವುದಿಲ್ಲ. ಶೇ.62 ಸಿಬ್ಬಂದಿಗಳು ಲಸಿಕೆ ಪಡೆದುಕೊಂಡಿರುತ್ತಾರೆ. ಇನ್ನೂ ಮುಂದೆ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಬುದಾಗಿದೆ ಎಂದು ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ.ರೆಡ್ಡಿ ಅವರು ತಿಳಿಸಿದ್ದಾರೆ.
ಕೋವಿಡ್ ಲಸಿಕಾ ನೀಡಿಕೆ ಸಾಧನೆ: ಜ.16ರಂದು ಬ್ರಿಮ್ಸ್ ಬೀದರನಲ್ಲಿ ಶೇ.71ರಷ್ಟು, ತಾಲೂಕು ಸಾರ್ವಜನಿಕ ಆಸ್ಪತ್ರೆ ಔರಾದನಲ್ಲಿ ಶೇ.45, ತಾಲೂಕು ಸಾರ್ವಜನಿಕ ಆಸ್ಪತ್ರೆ ಬಸವಕಲ್ಯಾಣದಲ್ಲಿ ಶೇ.57ರಷ್ಟು, ತಾಲೂಕು ಸಾರ್ವಜನಿಕ ಆಸ್ಪತ್ರೆ ಹುಮನಾಬಾದನಲ್ಲಿ ಶೇ.61ರಷ್ಟು, ತಾಲೂಕು ಸಾರ್ವಜನಿಕ ಆಸ್ಪತ್ರೆ ಭಾಲ್ಕಿನಲ್ಲಿ ಶೇ.52ರಷ್ಟು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಆಣದೂರನಲ್ಲಿ ಶೇ. 92ರಷ್ಟು ಜನ ಆರೋಗ್ಯ ಸಿಬ್ಬಂಧಿಯು ಲಸಿಕೆ ಪಡೆದುಕೊಂಡಿರುತ್ತಾರೆ ಎಂದು ಡಿಎಚ್‍ಓ ಅವರು ಮಾಹಿತಿ ನೀಡಿದ್ದಾರೆ.
ಪ್ರವೇಶ ನಿಷೇಧ: ಲಸಿಕೆ ಪಡೆದುಕೊಂಡವರ ಆರೋಗ್ಯದ ಬಗ್ಗೆ ವೈದ್ಯಾಧಿಕಾರಿಗಳು ಅಬ್ಸರ್ವೇಶನ್ ಕೋಣೆಯಲ್ಲಿ ಅರ್ಧಗಂಟೆಗಳ ಕಾಲ ನಿಗಾವಹಿಸಿರುವುದು ಕಂಡುಬಂದಿತು. ಲಸಿಕಾ ಕೇಂದ್ರದೊಳಗೆ ಲಸಿಕೆ ಪಡೆಯುವವರು ಹಾಗೂ ನಿಯೋಜಿತ ಅಧಿಕಾರಿಗಳ ಪ್ರವೇಶ ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ನಿμÉೀಧಿಸಲಾಗಿತ್ತು.
ಲಸಿಕೆ ಪಡೆದವರು 28 ದಿನಗಳ ನಂತರ ಮತ್ತೆ ಎರಡನೇ ಡೊಸ್ ಪಡೆಯಲು ಆಗಮಿಸಬೇಕಾಗುತ್ತದೆ ಎಂದು ಇದೆ ವೇಳೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಲಸಿಕಾ ನೀಡಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಿರ್ಮಲಾ ವೈಜಿನಾಥ ಮಾನೆಗೋಪಾಳೆ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಗಾದಗಿ, ತಾ.ಪಂ. ಅಧ್ಯಕ್ಷರಾದ ವಿಜಯಕುಮಾರ ಬರೂರೆ, ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಶಿವಕುಮಾರ, ಜಿಲ್ಲಾ ಕೋವಿಡ್-19 ಲಸಿಕಾಕರಣ ನೊಡಲ್ ಅಧಿಕಾರಿಗಳಾದ ಡಾ.ವಿವೇಕ ದೊರೆ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ರತಿಕಾಂತ ಸ್ವಾಮಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳಾದ ಮಹೇಶ ಬಿರಾದಾರ, ಡಾ. ಅನೀಲ್‍ಕುಮಾರ ಚಿಂತಾಮಣಿ, ಸೇರಿದಂತೆ ವ್ಯಾಕ್ಸಿನೆಷನ್ ಕಾರ್ಯಕ್ರಮದ ಅಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬ್ರಿಮ್ಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.