ತಿರುಮಲ, ಡಿ 26 (ಯುಎನ್‍ಐ) ವೈಕುಂಠ ಏಕಾದಶಿಯ ದಿನವಾದ ಡಿ 25ರ ಶುಕ್ರವಾರದಂದು ಒಟ್ಟು 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದಾರೆ.
ಶ್ರೀವಾರಿ ಹುಂಡಿಯಲ್ಲಿ ದಾಖಲೆಯ4.39 ಕೋಟಿ ರೂ.ಸಂಗ್ರಹವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ಅವಧಿ ಮುಗಿದ ಬಳಿಕ ಜೂನ್ 8 ರಿಂದ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಶ್ರೀವಾರಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ನಂತರ ಗರಿಷ್ಠ ಮೊತ್ತದ ಹುಂಡಿ ಸಂಗ್ರಹ ಇದಾಗಿದೆ.