ನವದೆಹಲಿ : ದೆಹಲಿಯಲ್ಲಿ ರೈತರ ಪ್ರತಿಭಟನೆ 5 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಪ್ರತಿಭಟನೆ ಮುಂದುವರೆದಿದೆ.ಮುಂದಿನ ದಿನಗಳಲ್ಲಿ ತನ್ನ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಹೇಳಿದೆ.
ಕಿಸಾನ್ ಮೋರ್ಚಾದ ಪಂಜಾಬ್ ಘಟಕವು ಭಾನುವಾರ ನಾಳೆ ಕೇಂದ್ರದೊಂದಿಗೆ ಮುಂದಿನ ಸುತ್ತಿನ ಮಾತುಕತೆ ನಡೆಸಲಿದೆ.
ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ದೆಹಲಿಯಲ್ಲಿ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್ಸಿಸಿ) ಮತ್ತು ಸಾಮಾನ್ಯ ಸಭೆಯ ಸಭೆಗಳನ್ನು ನಡೆಸಲಿದೆ ಎನ್ನಲಾಗಿದೆ.
ಶುಕ್ರವಾರ, ‘ಭಾರತ್ ಬಂದ್’ ಕರೆ ನಡುವೆ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಸ್ಥಾಪಿಸಲಾದ ಬ್ಯಾರಿಕೇಡ್ ಗಳತ್ತ ಸಾಗುತ್ತಿದ್ದ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದರು. ರೈತ ಮುಖಂಡರು ಮತ್ತು ಸರ್ಕಾರದ ನಡುವಿನ ಇತ್ತೀಚಿನ ಮಾತುಕತೆಗಳು ಅಪೂರ್ಣವಾಗಿ ಉಳಿದಿದ್ದರಿಂದ ಹೊಸ ಘರ್ಷಣೆ ಸಂಭವಿಸಿದೆ.