ನವದೆಹಲಿ ಡಿ 17 (ಯುಎನ್‍ಐ): ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 22 ದಿನ ತಲುಪಿದೆ.
ಪ್ರತಿಭಟನಾಕಾರರ ಸಂಧಾನಕ್ಕೆ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಆದೇಶ ತಮಗೆ ನೈತಿಕ ಗೆಲುವಾಗಿದೆ. ಆದರೆ, ಕೇಂದ್ರ ಸರ್ಕಾರ ಮೂರು ಹೊಸ ಕಾಯ್ದೆಗಳನ್ನು ರದ್ದುಗೊಳಿಸಿದಾಗ ಮಾತ್ರ ಈ ಗೆಲುವು ರೈತರಿಗೆ ದೊರಕುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ (ಎಐಸಿಎಸ್‍ಸಿಸಿ) ಹೇಳಿದೆ.
ನ್ಯಾಯಾಲಯದ ಆದೇಶಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೂರು ಹೊಸ ಕೃಷಿ ಕಾನೂನು ಮತ್ತು ವಿದ್ಯುತ್ ಕಾನೂನು 2020 ಅನ್ನು ರದ್ದುಗೊಳಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.