ಮಡಿಕೇರಿ: 29-08-2022 ರಂದು ಭಾಗಮಂಡಲ – ಮಡಿಕೇರಿ ರಸ್ತೆಯಲ್ಲಿರುವ ಐ.ಬಿ ಜಂಕ್ಷನ್ ಸಮೀಪ ಕೆಎಲ್-33 ಎಫ್ -6825 ರ ಮಾರುತಿ ಸೆಲೇರಿಯೋ ವಾಹನದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶ್ರೀಮತಿ ಪ್ರಿಯಾಂಕ, ಪಿಎಸ್‌ಐ, ಬೆಳ್ಳಿಯಪ್ಪ, ಎಎಸ್‌ಐ, ಮಹದೇವಸ್ವಾಮಿ ಸಿಬ್ಬಂದಿ ಭಾಗಮಂಡಲ ಪೊಲೀಸ್ ಠಾಣೆ ರವರ ತಂಡ ದಾಳಿ ನಡೆಸಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೂಲದ ಅಹಮ್ಮದ್ ಕಬೀರ್, 37 ವರ್ಷ, ಅಬ್ದುಲ್ ಖಾದರ್, 37 ವರ್ಷ, ಮಹಮ್ಮದ್ ಮುಜಮಿಲ್, 37 ವರ್ಷ ಎಂಬವವರನ್ನು ದಸ್ತಗಿರಿ ಮಾಡಿ, 1 ಕೆ.ಜಿ 160 ಗ್ರಾಂ ತೂಕದ ಹ್ಯಾಶಿಷ್ ಆಯಿಲ್ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಂಡು ಸದರಿ ಆರೋಪಿಗಳ ಮೇಲೆ ಭಾಗಮಂಡಲ ಪೊಲೀಸ್ ಠಾಣೆ ಮೊ.ಸಂ: 21/2022 ಕಲಂ: 20(b)(ii)(B)(C) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತು.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀಮತಿ ಪ್ರಿಯಾಂಕ, ಪಿಎಸ್‌ಐ ಮತ್ತು ಶ್ರೀ ಬೆಳ್ಳಿಯಪ್ಪ, ಎಎಸ್‌ಐ ರವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಮೇಲ್ಕಂಡ ಆರೋಪಿಗಳ ಮೇಲೆ ನಂ:ಎ/24/2022 ದಿ: 21-11-2022 ರಂತೆ ದೋಷಾರೋಪಣ ಪತ್ರವನ್ನು ಮಾನ್ಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ 01-02-2024 ರಂದು ಪ್ರಕರಣದ ಆರೋಪಿಗಳಾದ ಅಹಮ್ಮದ್ ಕಬೀರ್, 37 ವರ್ಷ, ಅಬ್ದುಲ್ ಖಾದರ್, 37 ವರ್ಷ, ಮಹಮ್ಮದ್ ಮುಜಮಿಲ್, 37 ವರ್ಷ ಮೂರು ಆರೋಪಿಗಳಿಗೆ ಕಲಂ: 20(b)(ii)(B)(C) NDPS Act ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಪ್ರತಿ ಆರೋಪಿಗೆ ₹. 1,00,000/- ಗಳ ದಂಡ & ದಂಡ ತಪ್ಪಿದ್ದಲ್ಲಿ 3 ವರ್ಷ ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಿ ಘನ ನ್ಯಾಯಾಲಯವು ತೀರ್ಪು ನೀಡಿದೆ.