ಭಟ್ಕಳ ನಾಲ್ವರ ಹತ್ಯಾ ಪ್ರಕರಣ: ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ

ಉತ್ತರ ಕನ್ನಡ, ಫೆಬ್ರವರಿ 25 : ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಟ್ಕಳ ಪೇಟೆ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಗುರುವಾರ ಎಪ್ಪತ್ತು ವರ್ಷದ ಶಂಭು ಭಟ್, ಅವರ ಪತ್ನಿ ಮಾದೇವಿ (60), ಮಗ ರಾಜೀವ್ (40) ಮತ್ತು ಸೊಸೆ ಕುಸುಮಾ (35) ಅವರನ್ನು ಕಡಿದು ಕೊಲೆ ಮಾಡಲಾಗಿದೆ.

ಕೊಲೆಯ ಹಿಂದೆ ಹಿರಿಯ ಸೊಸೆಯ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಪೊಲೀಸರ ಪ್ರಕಾರ, ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಮತ್ತು ಅವರ ವಿದ್ಯಾ ಅವರಿಗೆ ಪರಿಹಾರ ಮತ್ತು ಆಸ್ತಿ ಹಂಚಿಕೆಗೆ ಒತ್ತಾಯಿಸಿದರು.

ಶಂಭು ಭಟ್ ಮೂರು ಎಕರೆ ಜಮೀನು ಹೊಂದಿದ್ದರು. ವಿದ್ಯಾ ಭಟ್ ಅವರಿಗೆ 1.9 ಎಕರೆ ಜಮೀನು ನೀಡಿದ್ದರೂ ಅವರು ಮೂರಕ್ಕೆ ಬೇಡಿಕೆ ಇಟ್ಟಿದ್ದರು.ನಂತರ ವಿಷಯ ವಿವಾದಕ್ಕೆ ತಿರುಗಿತ್ತು.

ಚಿತ್ರ ಕೃಪೆ: ಸಾಹಿಲ್

Latest Indian news

Popular Stories