ಗಂಗೊಳ್ಳಿ: ಸಮುದ್ರದಲ್ಲಿ ತೇಲಿ ಬಂದ ಅಪರಿಚಿತ ಶವ

ಗಂಗೊಳ್ಳಿ: ಸಮುದ್ರದಲ್ಲಿ ಅಪರಿಚಿತ ಶವವೊಂದು ತೇಲಿ ಬಂದಿದ್ದು ಮೀನುಗಾರರು ಶವವನ್ನು ದಡಕ್ಕೆ ತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೋದವರು ಸುಮಾರು 09:30ಕ್ಕೆ ಕರೆ ಮಾಡಿ ಸಮುದ್ರದಲ್ಲಿ ಮೃತದೇಹವೊಂದು ತೇಲಿಕೊಂಡು ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಸಮುದ್ರದ ದಡಕ್ಕೆ ತಂದಿದ್ದು ನೋಡಿದಾಗ ಸುಮಾರು 40-50 ವರ್ಷ ಪ್ರಾಯದ ಗಂಡಸಿನ ಮೃತದೇಹವಾಗಿದ್ದು ಆತನು ಯಾವುದೋ ಕಾರಣದಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories