ಗಂಗೊಳ್ಳಿ: ಉಡುಪಿ ನ್ಯಾಯಾಲಯದಲ್ಲಿ ಹುದ್ದೆಯ ಆಮಿಷ – ಹಲವರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಅಸಾಮಿ!

ಗಂಗೊಳ್ಳಿ: ಉಡುಪಿ ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆ ಯ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಸಾಮಿಯೊಬ್ಬ ಹಲವರಿಗೆ ವಂಚನೆ ಮಾಡಿದ್ದಾನೆ.

ಆರೋಪಿ ದಯಾನಂದ ಉದ್ಯೋಗ ಕೊಡಿಸುವುದಾಗಿ ಸಂತ್ರಸ್ಥರಿಂದ ಸುಮಾರು 70 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ‌.

ಕೆಲಸಕ್ಕೆ ನೇಮಕಾತಿ ಯ ನೋಟಿಪಿಕೇಶನ್ ಹಾಗೂ ಲಿಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟೆಡ್, ಎಂಬ 2 ಜೆರಾಕ್ಷ್ ಪ್ರತಿಗಳನ್ನು ಆರೋಪಿಯು ದೂರುದಾರರಿಗೆ ನೀಡಿದ್ದು, ಆನ್ ಲೈನ್ ನಲ್ಲಿ ಬಂದ ನೇಮಕಾತಿಯ ನಿಜವಾದ ಲಿಸ್ಟ್ ನೋಡಿ ಅದರಲ್ಲಿ ತಮ್ಮ ಹೆಸರು ಇಲ್ಲದ ಕಾರಣ ವಿಚಾರಿಸಿದಾಗ ಹೈಕೋರ್ಟ್‌ನಿಂದ ಬೇರೆಯೇ ಲಿಸ್ಟ್ ಬರುವುದಾಗಿ ನಂಬಿಸಿದ್ದಾನೆ.

ನಂತರ ಅಪಾಯಿಂಟ್ ಮೆಂಟ್ ಕ್ಯಾಂಡಿಡೇಟ್ ಪ್ಲೇಸ್ ಮೆಂಟ್ ಲಿಸ್ಟ್ ಎಂಬ ಜೆರಾಕ್ಸ್ ಪ್ರತಿಯನ್ನು ನೀಡಿದ್ದು ಅದರಲ್ಲಿ ದಿನಾಂಕ 07/09/2023 ಎಂಬುದಾಗಿ ಇದ್ದು ಇದರ ಬಗ್ಗೆ ವಿಚಾರಿಸಿದಾಗ, ನೇರವಾಗಿ ಹೈ ಕೋರ್ಟ್‌ನಿಂದ ಪಡೆದುಕೊಂಡಿದ್ದು, ಆ ದಿನಾಂಕದಂದು ಉಡುಪಿ ಕೋರ್ಟ್‌ಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಬೇಕಾಗಿ ತಿಳಿಸಿ ವಂಚಿಸಿದ್ದಾನೆ.

ವಂಚನೆ ಮಾಡುವುದರ ಬಗ್ಗೆ ತಿಳಿದು ಹಣವನ್ನು ವಾಪಾಸು ನೀಡಲು ಕೇಳಿದಾಗ ಆರೋಪಿತನು ತನ್ನ ಹೆಂಡತಿ ಭವಾನಿ ಎಂಬುವವರ ಹೆಸರಿನ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಜಾಗದ ಜಿಪಿಎ ಪತ್ರವನ್ನು ಸಂತ್ರಸ್ಥರಿಗೆ ಜಿಪಿಎ ಮಾಡಿ ನೀಡಿದ್ದಲ್ಲದೇ, ದೂರುದಾರ ಸಂತ್ರಸ್ಥನಿಗೆ 6.5 ಲಕ್ಷ ರೂ ಮೌಲ್ಯದ ಚೆಕ್ ನೀಡಿರುತ್ತಾರೆ.

ಆರೋಪಿಯು ನ್ಯಾಯಾಲಯಗಳಲ್ಲಿ ‘ಡಿ’ ದರ್ಜೆಯ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಹಣವನ್ನು ನಗದಾಗಿ ಹಾಗೂ ಖಾತೆಯ ಮೂಲಕ ಪಡೆದುಕೊಂಡು ನಕಲಿಯಾಗಿ ಸೃಷ್ಟಿಸಿದ ಹೈಕೋರ್ಟ್‌ನದ್ದೆಂದು ಹೇಳಿದ ಪತ್ರಗಳನ್ನು ನಿಜವಾದ ಪತ್ರಗಳು ಎಂಬುದಾಗಿ ನೀಡಿ ವಂಚನೆ ಮಾಡಿದ್ದಲ್ಲದೇ, ಆರೋಪಿ ತನ್ನ ಹೆಂಡತಿಯಾದ ಭವಾನಿ ರವರ ಜೊತೆ ಸೇರಿಕೊಂಡು ಕುಂದಾಪುರದ ನೋಟರಿ ವಕೀಲರ ಮೂಲಕ ಜಾಗದ ಜಿಪಿಎ ಮಾಡಿಕೊಟ್ಟು, ಜಾಗವನ್ನು ವರ್ಗಾಯಿಸದೇ ವಂಚನೆ ಮಾಡಿ ಒಟ್ಟು 70.25 ಲಕ್ಷ ರೂ ಹಣ ವಂಚಸಿರುವ ಕುರಿತು ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2024 ಕಲಂ: 468, 403, 471, 420 ಜೊತೆ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories