ದಿನನಿತ್ಯ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ ಅದೇ ರೀತಿ ಇಲ್ನೊಂದು ಪ್ರಕರಣ ನೀವೆ ನೋಡಿ.. ಪತಿಯ ತಂಗಿಯ ಎಂಗೇಜ್ಮೆಂಟ್ಗೆ ಪತ್ನಿ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ನಡೆದಿದೆ.
ಜಯಪ್ರಕಾಶ್ ತನ್ನ ಪತ್ನಿ ದಿವ್ಯಶ್ರೀಗೆ ಚಾಕು ಇರಿದಿದ್ದಾರೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ರನ್ನು ಬಂಧಿಸಲಾಗಿದೆ.
2019ರಲ್ಲಿ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
ಪೋಷಕರ ವಿರೋಧ ಹಿನ್ನಲೆ ಬೆಂಗಳೂರಲ್ಲಿ ವಾಸವಾಗಿದ್ದರು. ಗಂಡನಿಗೆ ಅನಾರೋಗ್ಯ ಹಿನ್ನಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದಳು. ಮೊದಲು ಮೂಡಲಪಾಳ್ಯದಲ್ಲಿ ವಾಸವಿದ್ದ ದಂಪತಿ, ನಂತರ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಮದುವೆ ಆದಾಗಿನಿಂದಲೂ ಜಯಪ್ರಕಾಶ್ಗೆ ತನ್ನ ಪತ್ನಿ ಮೇಲೆ ಅನುಮಾನವಿತ್ತು. ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಜಯಪ್ರಕಾಶ್ ಗಲಾಟೆ ಮಾಡ್ತಿದ್ದ. ಫೋನಲ್ಲಿ ಯಾರ ಯಾರ ಜೊತೆಗೆ ಮಾತಾಡ್ತಿಯ ಎಂದು ಹಲ್ಲೆ ನಡೆಸುತ್ತಿದ್ದ. ಹೀಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರ್ಲಿಲ್ಲ ಎಂಬ ಕೋಪ ಕೂಡ ಹೆಚ್ಚಾಗಿದ್ದು ಜಯಪ್ರಕಾಶ್ ಚಾಕು ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಮುಂದಾದಾಗ ಚಾಕು ಕಾಲಿಗೆ ತಾಕಿ ದಿವ್ಯಶ್ರೀಗೆ ಗಾಯಗಳಾಗಿವೆ. ಕಾಲಿಗೆ ಗಾಯ ಆಗಿದ್ದು ಎಂಟು ಹೊಲಿಗೆ ಹಾಕಲಾಗಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಜಯಪ್ರಕಾಶ್ ಗೆ ಶಿಕ್ಷೆಯಾಗಿದೆ.