ವಿವಿಧ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ‘ಕಾಫಿ’ ಕಾರ್ಮಿಕರ ವಿಮಾ ಯೋಜನೆಗೆ ನಾಳೆ ಚಾಲನೆ

ಭಾರತೀಯ ಕಾಫಿ ಮಂಡಳಿ ಮತ್ತು ವಿವಿಧ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಕಾಫಿ ತೋಟದ ಕಾರ್ಮಿಕರ ಅವಘಡದ ಭದ್ರತೆಗಾಗಿ ಕಾರ್ಮಿಕ ವಿಮಾ ಯೋಜನೆಗೆ ಚಾಲನೆ ಕಾರ್ಯಕ್ರಮವು ಫೆಬ್ರವರಿ 24 ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ಜ್ಯೋತಿ ನಗರದ ಕಡೂರು ರಸ್ತೆಯ ಜಿಲ್ಲಾ ಪಂಚಾಯಿತಿ ಹಿಂಭಾಗದ ಕಾಫಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಇತರರು ಪಾಲ್ಗೊಳ್ಳಲಿದ್ದಾರೆ.

Latest Indian news

Popular Stories