ಮಡಿಕೇರಿ ಜ.8 : ನಗರದ ಸಾಯಿ ಅಸ್ಟ್ರೋಟರ್ಫ್ ಮೈದಾನದ ಎದುರು ರೂ.1.45 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಮಡಿಕೇರಿ ನಗರವನ್ನು ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿದೆ. ಉಳಿದಿರುವ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಕಾರ್ಯದರ್ಶಿ ಎಸ್.ಸಿ.ಸತೀಶ್, ನಗರಾಧ್ಯಕ್ಷ ಮನುಮಂಜುನಾಥ್, ಕಾರ್ಯದರ್ಶಿ ಅಪ್ಪಣ್ಣ, ನಗರ ಯುವ ಮೋರ್ಚಾದ ಅಧ್ಯಕ್ಷ ನವೀನ್ ಪೂಜಾರಿ, ಎಸ್.ಟಿ.ಮೋರ್ಚಾದ ನಗರಾಧ್ಯಕ್ಷ ವಿ.ಟಿ.ನಾಗೇಶ್, ಮಹಿಳಾ ಕಾರ್ಯದರ್ಶಿ ಅನಿತಾಪೂವಯ್ಯ, ಪ್ರಮುಖರಾದ ಜಗದೀಶ್, ಸವಿತಾ ರಾಕೇಶ್, ಕೆ.ಎಸ್.ರಮೇಶ್ ಮತ್ತಿತರರು ಹಾಜರಿದ್ದರು.